ADVERTISEMENT

ಕಿಂಗ್‌ ಖಾನ್‌ ಶಾರೂಕ್‌ಗೆ 54ನೇ ಹುಟ್ಟು ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 7:15 IST
Last Updated 2 ನವೆಂಬರ್ 2019, 7:15 IST
   

ಮುಂಬೈ: ಬಾಲಿವುಡ್‌ನ ಬಾದ್ ಶಾ, ಕಿಂಗ್‌ ಖಾನ್‌ ಎಂದೇ ಖ್ಯಾತರಾಗಿರುವ ಶಾರೂಕ್‌ಖಾನ್‌ ಅವರಿಗೆ ಇಂದು (ನವೆಂಬರ್‌ 2) 54 ನೇ ಹುಟ್ಟು ಹಬ್ಬದ ಸಂಭ್ರಮ.

ಶುಕ್ರವಾರ ತಡ ರಾತ್ರಿ ಶಾರೂಕ್‌ಅವರ ನಿವಾಸ ಮುನ್ನತ್‌ ಎದುರು ಸಾವಿರಾರು ಅಭಿಮಾನಿಗಳು ಸೇರಿದ್ದರು. 1 ಗಂಟೆ ಸುಮಾರಿಗೆ ಮನೆಯ ಮಹಡಿಯ ಮೇಲೆ ಬಂದು ಅಭಿಮಾನಿಗಳತ್ತ ಕೈ ಬೀಸಿ ನಮಸ್ಕರಿಸಿದರು. ಈ ವೇಳೆ ಅಭಿಮಾನಿಗಳು ಹ್ಯಾಪಿಬರ್ತೆಡೆ ಶಾರೂಕ್‌ಎಂದು ಕೂಗುತ್ತಿದ್ದರು.

ಶಾರೂಕ್‌ ನಿವಾಸದ ಸುತ್ತ ಮುತ್ತ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಆಯ್ದ ಗಣ್ಯರಿಗೆ ಮಾತ್ರ ಅವರ ನಿವಾಸದ ಒಳಗೆಹೋಗಲು ಅವಕಾಶ ನೀಡಲಾಗಿತ್ತು.

ADVERTISEMENT

ಬೆಳಗಿನ ಜಾವ ಮನೆಯ ಮುಂಭಾಗದಲ್ಲಿ ಅಭಿಮಾನಿಗಳೊಂದಿಗೆ ಶಾರೂಕ್‌ ಸೆಲ್ಪಿ ತೆಗೆದುಕೊಂಡರು.

ಶಾರೂಕ್‌ ಖಾನ್‌ ಅವರ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಬಾಲಿವುಡ್‌ ನಟ ನಟಿಯರು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಉದ್ದಿಮೆದಾರರು ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಅಭಿಮಾನಿಗಳು ಜನ್ಮದಿನದ ಶುಭಾಶಯ ಕೋರಿದ್ದಾರೆ.

ಕಳೆದ ವರ್ಷ ಶಾರೂಕ್‌ ಅವರಜಿರೋ ಸಿನಿಮಾ ಬಿಡುಗಡೆಯಾಗಿತ್ತು. ಈ ವರ್ಷಅವರುಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಸ್ಟಾರ್‌ ವರ್ಲ್ಡ್‌ನಲ್ಲಿ ಇಂದು ರಾತ್ರಿ ಟೆಡ್‌ ಟಾಕ್‌ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದೇ ವೇಳೆ ಹೊಸ ಸಿನಿಮಾ ಮಾಡುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.