ಧರ್ಮ ಕೀರ್ತಿರಾಜ್, ನಿಖಿತಾಸ್ವಾಮಿ ಜೋಡಿಯಾಗಿ ನಟಿಸಿರುವ ‘ಟಕಿಲಾ’ ಚಿತ್ರದ ಗೀತೆಗೆ ನಟ ಶರಣ್ ಧ್ವನಿಯಾಗಿದ್ದಾರೆ. ವಿ.ನಾಗೇಂದ್ರಪ್ರಸಾದ್ ಸಾಹಿತ್ಯವಿರುವ ಈ ಚಿತ್ರದ ಶೀರ್ಷಿಕೆ ಗೀತೆಯನ್ನು ಶರಣ್ ಹಾಡಿದ್ದು, ಇತ್ತೀಚೆಗಷ್ಟೇ ಹಾಡಿನ ರೆಕಾರ್ಡಿಂಗ್ ಮುಗಿದಿದೆ.
ಹಿರಿಯ ನಿರ್ದೇಶಕ ಕೆ.ಪ್ರವೀಣ್ ನಾಯಕ್ ಚಿತ್ರದ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇವರು ಈ ಹಿಂದೆ ಕೆಲವಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಮರಡಿಹಳ್ಳಿ ನಾಗಚಂದ್ರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
‘ಚಿತ್ರದ ಪೋಸ್ಟ್‌ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ. ವಿಶಿಷ್ಟ ಪ್ರೇಮಕಥೆಯನ್ನು ಹೊಂದಿರುವ ಚಿತ್ರವಿದು. ಶೀಘ್ರದಲ್ಲಿ ತೆರೆಗೆ ಬರಲಿದೆ’ ಎಂದಿದ್ದಾರೆ ನಿರ್ದೇಶಕರು.
ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್ ಶರ್ಮ ಮುಂತಾದವರು ನಟಿಸಿದ್ದಾರೆ. ಟಾಪ್‌ಸ್ಟಾರ್ ರೇಣು ಸಂಗೀತ, ಪಿ.ಕೆ.ಹೆಚ್.ದಾಸ್ ಛಾಯಾಚಿತ್ರಗ್ರಹಣ, ಕೆ.ಗಿರೀಶ್‌ಕುಮಾರ್ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ದೇವರಾಯನದುರ್ಗ, ಸಕಲೇಶಪುರದಲ್ಲಿ ಚಿತ್ರೀಕರಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.