ADVERTISEMENT

'ಶಿವ 143' ಚಿತ್ರತಂಡದಿಂದ ಪ್ರಚಾರ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 4:44 IST
Last Updated 19 ಆಗಸ್ಟ್ 2022, 4:44 IST
‘ಶಿವ 143‘ ಚಿತ್ರತಂಡದವರು ಗುರುವಾರ ಹೊಸಪೇಟೆಯಲ್ಲಿ ತೆರೆದ ವಾಹನದಲ್ಲಿ ಚಿತ್ರದ ಪರ ಪ್ರಚಾರ ಕೈಗೊಂಡರು–ಪ್ರಜಾವಾಣಿ ಚಿತ್ರ
‘ಶಿವ 143‘ ಚಿತ್ರತಂಡದವರು ಗುರುವಾರ ಹೊಸಪೇಟೆಯಲ್ಲಿ ತೆರೆದ ವಾಹನದಲ್ಲಿ ಚಿತ್ರದ ಪರ ಪ್ರಚಾರ ಕೈಗೊಂಡರು–ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಚಿತ್ರನಟ ರಾಮ್‌ಕುಮಾರ್ ಅವರ ಮಗ ಧೀರೆನ್ ರಾಮ್‌ಕುಮಾರ್ ನಟಿಸಿರುವ ‘ಶಿವ 143’ ಚಿತ್ರದ ಪ್ರಚಾರ ಕಾರ್ಯ ಗುರುವಾರ ನಗರದಲ್ಲಿ ನಡೆಯಿತು.

ಧೀರೆನ್‌ ನಟನೆಯ ಮೊದಲ ಚಿತ್ರ ಇದಾಗಿದ್ದು, ಆ.26 ರಾಜ್ಯದಾದ್ಯಂತ ತೆರೆ ಕಾಣಲಿದೆ. ಧೀರೆನ್ ತಾಯಿ ಪೂರ್ಣಿಮಾ, ಸಹೋದರಿ, ನಟಿ ಧನ್ಯ ರಾಮ್‌ಕುಮಾರ್, ಬಿಜೆಪಿ ನಾಯಕಿ ಕವಿತಾ ಸಿಂಗ್ ಹಾಗೂ ಚಿತ್ರ ತಂಡದ ಇತರೆ ಸದಸ್ಯರು ನಗರದಲ್ಲಿ ತೆರೆದ ವಾಹನದಲ್ಲಿ ಪ್ರಚಾರ ಕೈಗೊಂಡರು. ವಡಕರಾಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪುನೀತ್ ರಾಜಕುಮಾರ್ ವೃತ್ತಕ್ಕೆ ಬಂದರು. ಅಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿಗೆ ಮಾಲಾರ್ಪಣೆ, ಸೇಬಿನ ಹಾರ ಹಾಕಿ, ಪುತ್ಥಳಿಯನ್ನು ತಬ್ಬಿಕೊಂಡು ಅಭಿಮಾನ ತೋರಿದರು. ಈ ವೇಳೆ ಅಭಿಮಾನಿಗಳು ಘೋಷಣೆ ಹಾಕಿದರು.

‘ಆ.26ಕ್ಕೆ ಸಿನಿಮಾ ಬಿಡುಗಡೆಯಾಗಲಿದ್ದು ಚಿತ್ರಮಂದಿರಗಳಲ್ಲಿ ನೋಡಿ ಯಶಸ್ವಿಗೊಳಿಸಿಬೇಕು’ ಎಂದು ಧೀರೆನ್‌ ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.