ADVERTISEMENT

ಶಿವಾಜಿ ಸುರತ್ಕಲ್‌ ಟ್ರೇಲರ್‌: ರಮೇಶ್‌ ಅರವಿಂದ್‌ ಪತ್ತೆದಾರಿಯಾಗಿ ಬರುತ್ತಿದ್ದಾರೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 10:32 IST
Last Updated 7 ಫೆಬ್ರುವರಿ 2020, 10:32 IST
   

ಬೆಂಗಳೂರು:ರಮೇಶ್‌ ಅರವಿಂದ್‌ ಅವರುಬಣ್ಣದಲೋಕ ಪ್ರವೇಶಿಸಿ ಮೂರು ದಶಕಗಳಾಗಿದ್ದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ 101ನೇ ಸಿನಿಮಾಶಿವಾಜಿ ಸುರತ್ಕಲ್‌. ಈ ಚಿತ್ರದ ಟ್ರೇಲರ್‌ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಶಿವಾಜಿ ಸುರತ್ಕಲ್‌ ಚಿತ್ರದಲ್ಲಿ ರಮೇಶ್‌ ಅರವಿಂದ್‌ಪತ್ತೇದಾರಿಯಾಗಿ ಬಣ್ಣ ಹಚ್ಚಿದ್ದಾರೆ.ರೊಮ್ಯಾಂಟಿಕ್‌, ಆ್ಯಕ್ಷನ್‌, ಥ್ರಿಲ್ಲರ್‌ ಚಿತ್ರಗಳಲ್ಲಿ ನಟಿಸಿರುವ ಅವರಿಗೆ ಈ ಪಾತ್ರ ವಿಭಿನ್ನವಾಗಿದೆ. ಟ್ರೇಲರ್‌ ಬಿಡುಗಡೆಯಾಗಿ 21 ಗಂಟೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಆಕಾಶ್‌ ಶ್ರೀವತ್ಸ ಅವರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದುಜಯಂತ ಕಾಯ್ಕಿಣಿ ಎರಡು ಹಾಡುಗಳನ್ನು ಬರೆದಿದ್ದಾರೆ.

ADVERTISEMENT

ಕಳೆದ ವರ್ಷ ಅವರು ಸಿನಿಮಾವು ಬಿಡುಗಡೆಯಾಗಿರಲಿಲ್ಲ. ಇದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.ಶಿವಾಜಿ ಸುರತ್ಕಲ್‌ ಸಿನಿಮಾ ಬರುವ ಫೆಬ್ರುವರಿ 21ಕ್ಕೆ ಬಿಡುಗಡೆಯಾಗುತ್ತಿರುವುದರಿಂದ ಅಭಿಮಾನಿಗಳಲ್ಲಿ ಸಂತಸ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.