ADVERTISEMENT

ಆಪರೇಷನ್‌ ಲಂಡನ್‌ ಕೆಫೆ: ಕನ್ನಡಕ್ಕೆ ಬಂದ ಶಿವಾನಿ ಸುರ್ವೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 23:30 IST
Last Updated 27 ನವೆಂಬರ್ 2025, 23:30 IST
ಶಿವಾನಿ ಸುರ್ವೆ 
ಶಿವಾನಿ ಸುರ್ವೆ    

ಸಡಗರ ರಾಘವೇಂದ್ರ ನಿರ್ದೇಶನದ ‘ಆಪರೇಷನ್‌ ಲಂಡನ್‌ ಕೆಫೆ’ ಸಿನಿಮಾ ಮೂಲಕ ಮರಾಠಿ ನಟಿ ಶಿವಾನಿ ಸುರ್ವೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. 

ಹಿಂದಿ, ಮರಾಠಿ ಕಿರುತೆರೆಯಲ್ಲಿ ಹೆಚ್ಚಾಗಿ ನಟಿಸಿರುವ ಶಿವಾನಿ ‘ಟ್ರಿಪಲ್‌ ಸೀಟ್‌’ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ‌ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ‘ಆಪರೇಷನ್‌ ಲಂಡನ್‌ ಕೆಫೆ’ ಸಿನಿಮಾದಲ್ಲಿನ ನಟನೆಯ ಅನುಭವ ಕುರಿತು ಮಾತನಾಡಿದ ಶಿವಾನಿ, ‘ಈ ಸಿನಿಮಾದ ಶೂಟಿಂಗ್‌ ಏಕಕಾಲದಲ್ಲಿ ಮರಾಠಿ ಹಾಗೂ ಕನ್ನಡದಲ್ಲಿ ನಡೆದಿತ್ತು. ನಾನು ಕನ್ನಡವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ಆದರೆ ಕೊಂಚ ಮಾತನಾಡಬಲ್ಲೆ. ಇದು ನನ್ನ ಮೊದಲ ಕನ್ನಡ ಸಿನಿಮಾ. ಕನ್ನಡ ಹಾಗೂ ಮರಾಠಿ ಚಿತ್ರರಂಗದ ಅತಿ ದೊಡ್ಡ ಸಹಯೋಗದಲ್ಲಿ ನಡೆದ ಸಿನಿಮಾವಿದು. ಇದರಲ್ಲಿ ಶೇ 50 ಕನ್ನಡದ ಕಲಾವಿದರು ಹಾಗೂ ಶೇ 40 ಮರಾಠಿ ಕಲಾವಿದರಿದ್ದರು. ಹೊಸ ಸಂಸ್ಕೃತಿಯನ್ನು ಕರ್ನಾಟಕದಲ್ಲಿ ಕಂಡೆ. ಸುಮಾರು ಒಂದೂವರೆ ತಿಂಗಳು ಚಿತ್ರೀಕರಣಕ್ಕಾಗಿ ಕರ್ನಾಟಕದಲ್ಲಿದ್ದೆ. ಮುಂದೆ ಹೆಚ್ಚಿನ ಕನ್ನಡ ಸಿನಿಮಾಗಳಲ್ಲಿ ನಟಿಸುವ ಇಚ್ಛೆ ಇದೆ. ಕನ್ನಡದಲ್ಲೇ ಡಬ್‌ ಮಾಡುವ ಆಸೆಯೂ ಇತ್ತು. ಆದರೆ ಭಾಷೆಯ ವಿಷಯದಲ್ಲಿ ತುಂಬಾ ಸೂಕ್ಷ್ಮವಾಗಿರಬೇಕು. ಡಬ್ಬಿಂಗ್‌ ವೇಳೆ ತಪ್ಪುಗಳು ಆದರೆ ಅದು ಕನ್ನಡಿಗರಿಗೆ ನೋವಾಗಬಹುದು. ಹೀಗಾಗಿ ನಿರ್ದೇಶಕರು ಬೇರೆಯವರ ಬಳಿ ಡಬ್ಬಿಂಗ್‌ ಮಾಡಿಸಿದರು. ಅವರ ದನಿ ನನ್ನಂತೇ ಇರುವುದು ಆಶ್ಚರ್ಯ ಹುಟ್ಟಿಸಿತು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT