ADVERTISEMENT

‘ಗ್ರಾಮಾಯಣ’ಕ್ಕೆ ಶಿವರಾಜ್‌ಕುಮಾರ್‌ ಸಾಥ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 13:18 IST
Last Updated 18 ಜನವರಿ 2026, 13:18 IST
ವಿನಯ್‌ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ಮೇಘಾ ಶೆಟ್ಟಿ
ವಿನಯ್‌ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ಮೇಘಾ ಶೆಟ್ಟಿ   

ವಿನಯ್ ರಾಜ್‌ಕುಮಾರ್, ಮೇಘಾ ಶೆಟ್ಟಿ ಜೋಡಿಯಾಗಿ ನಟಿಸಿರುವ ‘ಗ್ರಾಮಾಯಣ’ ಚಿತ್ರದ ‘ಬೆಂಕಿ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಇದರೊಂದಿಗೆ ಬಹಳ ಕಾಲದಿಂದ ಅಪ್‌ಡೇಟ್‌ ಇಲ್ಲದೆ ನಿಂತಿದ್ದ ಚಿತ್ರಕ್ಕೆ ಮರುಜೀವ ಸಿಕ್ಕಿದೆ. ದೇವನೂರು ಚಂದ್ರು ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. 

ಶಿವರಾಜ್‌ಕುಮಾರ್‌ ಹಾಡು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಜತೆಗೆ ಚಿತ್ರತಂಡದೊಂದಿಗೆ ಹಾಡಿಗೆ ಹೆಜ್ಜೆಯನ್ನೂ ಹಾಕಿದರು. ಶಿವರಾಜ್‌ಕುಮಾರ್ ಹಾಗೂ ಸುಧಾರಾಣಿ ನಟನೆಯಲ್ಲಿ ಮೂಡಿಬಂದಿದ್ದ ‘ಮನ ಮೆಚ್ಚಿದ ಹುಡುಗಿ’ ಸಿನಿಮಾದ ‘ನಿನ್ನಾಣೆ ನಾನು ಬೆಂಕಿಯಲ್ಲಿ ತಪ್ಪು ಕಂಡೆನು’ ಹಾಡನ್ನು ಇಲ್ಲಿ ರಿಮೇಕ್ ಮಾಡಲಾಗಿದೆ. ಈ ಹಾಡನ್ನು ಕಪಿಲ್ ಕಪಿಲನ್, ಐರಾ ಉಡುಪಿ ಹಾಡಿದ್ದಾರೆ. ಚಿ ಉದಯಶಂಕರ್ ಸಾಹಿತ್ಯ, ಉಪೇಂದ್ರ ಕುಮಾರ್‌ ಮೂಲ ಸಂಗೀತದ ಈ ಗೀತೆಯನ್ನು ಪೂರ್ಣಚಂದ್ರ ತೇಜಸ್ವಿ ಮರು ಸಂಯೋಜಿಸಿದ್ದಾರೆ.

ಲಹರಿ ಫಿಲ್ಮ್ಸ್‌ ಚಿತ್ರಕ್ಕೆ ಬಂಡವಾಳ ಹೂಡಿದೆ.  ಅಚ್ಯುತ್‌ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ಚಿತ್ರದಲ್ಲಿದ್ದಾರೆ. ಸಂತೋಷ್‌ ರೈ ಪಾತಾಜೆ ಛಾಯಾಚಿತ್ರಗ್ರಹಣ, ದೀಪು ಎಸ್‌. ಕುಮಾರ್‌ ಸಂಕಲನವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.