ADVERTISEMENT

ವರುಣ್‌ ಧವನ್‌ಗೆ ಶ್ರದ್ಧಾ ಕಪೂರ್‌ ಮೇಲೆ ಕ್ರಶ್‌ ಆಗಿತ್ತಂತೆ!

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 11:18 IST
Last Updated 18 ಜನವರಿ 2020, 11:18 IST
ವರುಣ್‌ ಧವನ್‌ ಮತ್ತು ಶ್ರದ್ಧಾ ಕಪೂರ್‌
ವರುಣ್‌ ಧವನ್‌ ಮತ್ತು ಶ್ರದ್ಧಾ ಕಪೂರ್‌   

ಬೆಂಗಳೂರು:‘ನನಗೆ 8 ವರ್ಷಯಿದ್ದಾಗಲೇ ಶ್ರದ್ಧಾ ಕಪೂರ್‌ ಮೇಲೆ ಕ್ರಶ್‌ ಆಗಿತ್ತು’ ಎಂದು ನಟ ವರುಣ್‌ ಧವನ್‌ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಬಾಲ್ಯದಲ್ಲಿ ವರುಣ್‌ ಹಾಗೂ ಶ್ರದ್ಧಾ ಇಬ್ಬರೂ ಶಾಲೆಯಲ್ಲಿ ಸ್ಟಾರ್‌ ಕಿಡ್‌ಗಳಾಗಿ ಗುರುತಿಸಿಕೊಂಡಿದ್ದರು. ಹಾಗೇ ಅವರಿಬ್ಬರೂ ಆತ್ಮೀಯ ಸ್ನೇಹಿತರೂ ಸಹ. ವರುಣ್‌, ಶ್ರದ್ಧಾ ಕಪೂರ್‌ ಜೋಡಿಯಾಗಿ ನಟಿಸಿರುವ ‘ಸ್ಟ್ರೀಟ್‌ ಡಾನ್ಸರ್‌ ತ್ರೀಡಿ’ ಚಿತ್ರವು ಜನವರಿ 24ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯವೊಂದರಲ್ಲಿ ವರುಣ್‌, ‘ಶ್ರದ್ಧಾ ಮೇಲೆ ನನಗೆ 8 ವರ್ಷವಿದ್ದಾಗಲೇ ಕ್ರಶ್‌ ಆಗಿತ್ತು’ ಎಂದು ಹೇಳಿದ್ದಾರೆ.

‘ಸ್ಟ್ರೀಟ್‌ ಡಾನ್ಸರ್‌ ತ್ರೀಡಿ’ ಚಿತ್ರದಂತೆ ನಮ್ಮ ಕತೆಯೂ ಇದೆ. ಅಂತರಶಾಲಾ ಸ್ಪರ್ಧೆಗಳು, ಸಣ್ಣ ದ್ವೇಷ ಹಾಗೂ ಮನಸ್ಸಿನ ಆಳದಲ್ಲಿ ಪ್ರೀತಿಯೂ ಇತ್ತು’ ಎಂದು ಹೇಳಿದ್ದಾರೆ.

ADVERTISEMENT

‘ಸಣ್ಣ ವಯಸ್ಸಿನಲ್ಲಿ ಮನಸ್ಸಿನ ಭಾವನೆಗಳು ತುಂಬ ಚಂದವಾಗಿರುತ್ತವೆ. ಶ್ರದ್ಧಾ ಬಗ್ಗೆ ಉತ್ತಮ ಭಾವನೆ ನನ್ನ ಮನಸ್ಸಿನಲ್ಲಿತ್ತು. ಅದು ಪವಿತ್ರವಾದುದು. ನಾವಿಬ್ಬರು ಉತ್ತಮ ಸ್ನೇಹಿತರು’ ಎಂದು ಅವರು ಹೇಳಿದ್ದಾರೆ.

‘ಸ್ಟ್ರೀಟ್‌ ಡಾನ್ಸರ್‌ ತ್ರೀಡಿ’ ಚಿತ್ರವನ್ನು ರೆಮೊ ಡಿ ಸೋಜಾ ನಿರ್ದೇಶನಮಾಡಿದ್ದು, ಈ ಚಿತ್ರದಲ್ಲಿ ನೋರಾ ಫತೇಹಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ವರುಣ್‌ ಹಾಗೂ ಶ್ರದ್ಧಾ ಈ ಹಿಂದೆ 2015ರಲ್ಲಿ ‘ಎಬಿಸಿಡಿ 2’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಿದು ಈ ಜೋಡಿಯ ಎರಡನೇ ಚಿತ್ರ.

‘ಕೂಲಿ ನಂ.1’ ರಿಮೇಕ್‌ ಚಿತ್ರದಲ್ಲೂ ವರುಣ್‌ ಧವನ್‌ ಅಭಿನಯಿಸುತ್ತಿದ್ದಾರೆ. ಆ ಚಿತ್ರ ಮೇ 1ರಂದು ಬಿಡುಗಡೆಯಾಗಲಿದೆ. ಶ್ರದ್ಧಾ ಕಪೂರ್‌ ಆ್ಯಕ್ಷನ್‌ ಥ್ರಿಲ್ಲರ್‌ ‘ಭಾಗಿ 3’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈ ಚಿತ್ರ ಮಾರ್ಚ್‌ 6ರಂದು ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.