ADVERTISEMENT

‘ಎನ್ನ’ ಚೆಲುವೆ ಶ್ರುತಿ ಪೂಜಾರಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 20:15 IST
Last Updated 7 ಫೆಬ್ರುವರಿ 2020, 20:15 IST
ಶ್ರುತಿ ಆರ್‌.ಪೂಜಾರಿ
ಶ್ರುತಿ ಆರ್‌.ಪೂಜಾರಿ   

ಹೆಚ್ಚಿನ ಜನರು ಯಾವುದೇ ರಹಸ್ಯ ಸೂತ್ರಗಳಿಲ್ಲದೇ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಹೋಗುತ್ತಾರೆ. ಉನ್ನತ ಸ್ಥಾನಕ್ಕೆ ತಲುಪಬೇಕೆಂಬ ಬಯಕೆ ಹಲವಾರು ಉತ್ಸಾಹಿಗಳಿಗೆ ಇರುತ್ತದೆ. ಅದನ್ನು ಸಾಧಿಸಲು ಅವರು ದಾರಿಯನ್ನು ಹುಡುಕಿ ಗುರಿಯನ್ನು ತಲುಪುತ್ತಾರೆ. ಇದಕ್ಕೊಂದು ಉದಾಹರಣೆ ಹೀಗೆ ಕಷ್ಟದ ಪರಿಸರದಲ್ಲಿ ಬೆಳೆದು ಈಗ ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಪ್ರತಿಭೆ ಶ್ರುತಿಆರ್. ಪೂಜಾರಿ

ಶ್ರುತಿ ಪಡುಬಿದ್ರಿಯ ಅವರಾಲ್ ಮಟ್ಟುವಿನ ರಮೇಶ್ ಪೂಜಾರಿ ಹಾಗೂ ರೇವತಿ ಪೂಜಾರಿ ದಂಪತಿಯ ಪುತ್ರಿ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲೆ ಪೂರೈಸಿದ ಇವರು, ಮೂಲ್ಕಿಯ ವಿಜಯ ಕಾಲೇಜಿನಲ್ಲಿ ಬಿ.ಕಾಂ ಪದವಿ ಮುಗಿಸಿರುವರು. ಪ್ರಸ್ತುತ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಾಡೆಲಿಂಗ್ ಲೋಕದಲ್ಲಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಆರಂಭದಲ್ಲಿ ಶ್ರುತಿಅವರಿಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಆದರೂ, ಫೋಟೋ ಶೂಟ್ ಮಾಡುವುದರ ಮುಖಾಂತರ ಎಲ್ಲರ ಗಮನ ಸೆಳೆಯುತ್ತಿದ್ದರು. ಹೀಗೆ ತೆಗೆದ ಪೋಟೊಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್‌ಲೋಡ್‌ ಮಾಡುವ ಮೂಲಕ ಸಿನಿಮಾ ನಿರ್ದೇಶಕ ವಿಶ್ವನಾಥ್ ಕೋಡಿಕಲ್‍ ಅವರ ಗಮನ ಸೆಳೆದಿದ್ದರು. ಅದೇ ಸಂದರ್ಭದಲ್ಲಿ ‘ಎನ್ನ’ ತುಳು ಸಿನಿಮಾದ ಕಲಾವಿದರ ಆಯ್ಕೆಗೆ ಆಡಿಷನ್ ಸಹ ನಡೆಯುತ್ತಿತ್ತು. ಆ ಆಡಿಷನ್‍ನಲ್ಲಿ ಸಂಭಾಷಣೆ ತುಣುಕು ಕೊಟ್ಟು ಅಭಿನಯಿಸುವಂತೆ ತಿಳಿಸಿದಾಗ, ಎಲ್ಲರೂ ಮೆಚ್ಚುವಂತೆ ಶ್ರುತಿಅಭಿನಯಿಸಿದರು. ಮುಂದೆ ‘ಎನ್ನ’ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾದರು. ಆ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ADVERTISEMENT

‘ಈ ಸಿನಿಮಾವು ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು, ಚಿತ್ರದಲ್ಲಿ ಶೇಕಡ 90ರಷ್ಟು ಯುವ ಪ್ರತಿಭೆಗಳಿಗೆ ಅವಕಾಶ ನೀಡಿರುವುದರಿಂದ ನನಗೆ ಈ ಚಿತ್ರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅಷ್ಟೊಂದು ಕಷ್ಟ ಅನಿಸಲಿಲ್ಲ, ಹಾಗೂ ಅಭಿನಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ’ ಎಂದು ಹೇಳುತ್ತಾರೆ ಶ್ರುತಿ.

‘ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಗುರಿಯನ್ನಿಟ್ಟುಕೊಂಡು ಅದನ್ನು ತಲುಪಲು ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಆತ್ಮಸ್ಥೆರ್ಯ, ಧನಾತ್ಮಕ ಚಿಂತನೆ ಹಾಗೂ ಕಾರ್ಯತತ್ಪರತೆ ಮೂಲಕ ಮುಂದಕ್ಕೆ ಸಾಗಿದರೆ ಸಾಧನೆ ಸಾಧ್ಯ. ಏನೇ ಕಷ್ಟ ಬಂದರೂ ಅದಕ್ಕೆ ಎದೆಗುಂದದೆ ಸಾಧನೆಯ ಮೆಟ್ಟಿಲು ಏರಬೇಕು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.