‘ಲಕ್ಷ್ಮೀ ನಿವಾಸ’ ಧಾರಾವಾಹಿಯ ‘ಸಿದ್ದೇಗೌಡ್ರು’ ಪಾತ್ರದ ಮೂಲಕ ಗುರುತಿಸಿಕೊಂಡಿರುವ ನಟ ಧನಂಜಯ್ ಬೆಳ್ಳಿತೆರೆಯಲ್ಲಿ ಹೀರೊ ಆಗಿ ಮೊದಲ ಹೆಜ್ಜೆ ಇಡಲಿದ್ದಾರೆ.
ಈ ಹಿಂದೆ ‘ಫೋರ್ ವಾಲ್ಸ್’ ಎಂಬ ಸಿನಿಮಾ ನಿರ್ದೇಶಿಸಿದ್ದ ಎಸ್.ಎಸ್.ಸಜ್ಜನ್ ‘ಶುಭಕೃತ್ ನಾಮ ಸಂವತ್ಸರ’ ಎಂಬ ಸಿನಿಮಾ ನಿರ್ದೇಶಿಸಲಿದ್ದು, ಇದರಲ್ಲಿ ಧನಂಜಯ್ ನಾಯಕನಾಗಿ ನಟಿಸಲಿದ್ದಾರೆ.
ಡಬ್ಬಿಂಗ್ ಕಲಾವಿದ, ಡಾನ್ಸರ್ ಆಗಿರುವ ಧನಂಜಯ್ ‘ವಾಸಂತಿ ನಲಿದಾಗ’, ‘ಥಗ್ ಆಫ್ ರಾಮಘಡ’ ಎಂಬ ಚಿತ್ರಗಳಲ್ಲಿ ನಟಿಸಿದ್ದರು. ಶೀರ್ಷಿಕೆಯೇ ಹೇಳುವಂತೆ ಇದೊಂದು ಹಬ್ಬದ ಹಿನ್ನೆಲೆಯಲ್ಲಿ ನಡೆಯುವ ಕಥೆ. ಅದಕ್ಕೆ ಕ್ರೈಮ್ ಥ್ರಿಲ್ಲರ್ ಸ್ಪರ್ಶ ನೀಡಿದ್ದಾರೆ ಸಜ್ಜನ್. ಎಸ್.ವಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ‘ಶುಭಕೃತ್ ನಾಮ ಸಂವತ್ಸರ’ ತೆರೆಗೆ ಬರಲಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ತೆಲುಗಿನ ‘ರುದ್ರಮದೇವಿ’, ‘ಗರುಡವೇಗ’ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿರುವ ದೇವೇಂದ್ರ ವಡ್ಡೆ ಛಾಯಾಚಿತ್ರಗ್ರಹಣ, ಸುಧಾ ಶ್ರೀನಿವಾಸ್ ಸಂಗೀತ ನಿರ್ದೇಶನವಿರಲಿದೆ. ನವೆಂಬರ್‌ನಿಂದ ಚಿತ್ರತಂಡ ಶೂಟಿಂಗ್‌ಗೆ ಇಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.