ADVERTISEMENT

ಸಲ್ಮಾನ್–ರಶ್ಮಿಕಾ ನಟನೆಯ 'ಸಿಕಂದರ್‌’ ಮೊದಲ ಹಾಡಿಗೆ ಅಭಿಮಾನಿಗಳಿಂದ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2025, 7:39 IST
Last Updated 6 ಮಾರ್ಚ್ 2025, 7:39 IST
   

ಮುಂಬೈ: ಬಾಲಿವುಡ್ ನಟ ಸಲ್ಮಾನ್‌ ಖಾನ್‌ ಮತ್ತು ನಟಿ ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮಂಗಳವಾರ ‘ಜೋಹ್ರಾ ಜಬೀನ್’ ಹಾಡು ಬಿಡುಗಡೆಯಾಗಿದ್ದು, ವಿಭಿನ್ನ ಲುಕ್‌ನಲ್ಲಿ ಸಲ್ಮಾನ್ ಮತ್ತು ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

ಇಲ್ಲಿಯವರೆಗೆ ಈ ಹಾಡನ್ನು 2 ಕೋಟಿಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 37 ಸಾವಿರಕ್ಕಿಂತಲೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.

ADVERTISEMENT

ಸಮೀರ್ ಮತ್ತು ಡ್ಯಾನಿಶ್‌ ಸಾಬ್ರಿ ಬರೆದಿರುವ ಈ ಹಾಡಿಗೆ ಪ್ರೀತಮ್‌ ಅವರು ಸಂಗೀತ ಸಂಯೋಜಿಸಿದ್ದು, ನಕಾಶ್‌ ಅಜೀಜ್‌ ಮತ್ತು ದೇವ್ ನೇಗಿ ಹಾಡಿದ್ದಾರೆ.

ಎ.ಆರ್‌.ಮುರುಗದಾಸ್‌ ನಿರ್ದೇಶನದ ಈ ಚಿತ್ರ ಮಾರ್ಚ್‌ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಚಿತ್ರದಲ್ಲಿ ಕಾಜಲ್ ಅಗರ್‌ವಾಲ್‌, ಸತ್ಯರಾಜ್‌, ಶರ್ಮಾನ್‌ ಜೋಶಿ ಸೇರಿದಂತೆ ಹಲವು ತಾರೆಯರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.