ADVERTISEMENT

Sandalwood: ‘ಮೋಡ ಕವಿದ ವಾತಾವರಣ’ದಲ್ಲಿ ಸುನಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 23:30 IST
Last Updated 13 ಜುಲೈ 2025, 23:30 IST
   

ನಿರ್ದೇಶಕ ಸಿಂಪಲ್‌ ಸುನಿ ಬಳಿ ಸಾಲು ಸಾಲು ಸಿನಿಮಾಗಳಿವೆ. ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಬ್ಯೂಸಿ ನಿರ್ದೇಶಕ ಎನಿಸಿಕೊಂಡಿರುವ ಇವರು ‘ಮೋಡ ಕವಿದ ವಾತಾವರಣ’ ಎಂಬ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ. ತಮ್ಮೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಶೀಲಮ್‌ ಎಂಬ ಹೊಸ ಹುಡುಗನನ್ನು ಈ ಚಿತ್ರದ ಮೂಲಕ ನಾಯಕನಾಗಿ ಪರಿಚಯಿಸುತ್ತಿದ್ದಾರೆ. 

‘ಒಂದು ಸರಳ ಪ್ರೇಮಕಥೆ’ ನನ್ನ ಬದುಕಿಗೆ ಮತ್ತೊಮ್ಮೆ ತಿರುವು ನೀಡಿದ ಸಿನಿಮಾ. ಇದರ ಯಶಸ್ಸು ನನ್ನ ಜೀವನಕ್ಕೆ ಹೊಸ ಉತ್ಸಾಹ ನೀಡಿದೆ. ಇದಾದ ಬಳಿಕ ಕೈಗೆತ್ತಿಕೊಂಡಿರುವ ಸಿನಿಮಾವೇ ‘ಮೋಡ ಕವಿದ ವಾತಾವರಣ’. ಈಗಾಗಲೇ ಚಿತ್ರೀಕರಣ ಮುಗಿದಿದೆ. ರೀ-ರೆಕಾರ್ಡಿಂಗ್‌ ಕೆಲಸಗಳೆಲ್ಲ ಬಹುತೇಕ ಮುಗಿದು ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸಿದ್ದೇವೆ. ಸೈಂಟಿಫಿಕ್‌ ಫಿಕ್ಷನ್‌ ಪ್ರೇಮಕಥಾಹಂದರವನ್ನು ಹೊಂದಿರುವ ಚಿತ್ರ. ಇದರ ನಾಯಕ ನಮ್ಮ ಮನೆ ಮಗ. ಶಿಲಮ್‌ ನನ್ನ ಸಹೋದರನಿದ್ದಂತೆ’ ಎಂದರು ಸುನಿ.

ಸಾತ್ವಿಕಾ ಚಿತ್ರದ ನಾಯಕಿ. ‘ಇದು ನನ್ನ ಡ್ರೀಮ್‌ ಪ್ರಾಜೆಕ್ಟ್.‌ ಸುನಿ ಸರ್‌ ಜೊತೆ ಕೆಲಸ ಮಾಡಬೇಕೆಂದು ಕೇಳಿಕೊಂಡಿದ್ದೆ. ಅವರ ಬಳಿ ಕಲಿಯುವುದು ತುಂಬ ಇದೆ. ಈ ಜರ್ನಿಯಲ್ಲಿ ಬಹಳಷ್ಟು ಕಲಿತಿದ್ದೇನೆ’ ಎಂದರು ಸಾತ್ವಿಕಾ. 

ADVERTISEMENT

‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್‌ ಮೂವೀಸ್ ಈ ಸಿನಿಮಾ ನಿರ್ಮಾಣ ಮಾಡಿದೆ. ಸಂತೋಷ್ ರೈ ಪಾತಾಜೆ ಛಾಯಾಚಿತ್ರಗ್ರಹಣ, ಜೂಡಾ ಸ್ಯಾಂಡಿ ಹಾಗೂ ಜೇಡ್ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕಶ್ಯಪ್ ಸಂಕಲನ‌ ಸಿನಿಮಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.