ADVERTISEMENT

ಸಿಂಗಪುರದಲ್ಲಿ ‘ದ ಕಾಶ್ಮೀರ್‌ ಫೈಲ್ಸ್‌’ ನಿಷೇಧ ?

ಪಿಟಿಐ
Published 9 ಮೇ 2022, 13:43 IST
Last Updated 9 ಮೇ 2022, 13:43 IST
ದ ಕಾಶ್ಮೀರ್‌ ಫೈಲ್ಸ್‌ ಚಿತ್ರದ ಪೋಸ್ಟರ್
ದ ಕಾಶ್ಮೀರ್‌ ಫೈಲ್ಸ್‌ ಚಿತ್ರದ ಪೋಸ್ಟರ್   

ಸಿಂಗಪುರ(ಪಿಟಿಐ): ದೇಶದ ಸಿನಿಮಾನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ‘ದ ಕಾಶ್ಮೀರ್‌ ಫೈಲ್ಸ್’ ಸಿನಿಮಾವನ್ನು ಸಿಂಗಪುರದಲ್ಲಿ ನಿರ್ಬಂಧಿಸಲಾಗುವುದು ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

ಅಧಿಕಾರಿಗಳು ಸಿನಿಮಾವನ್ನು ಮೌಲ್ಯಮಾಪನ ಮಾಡಿದ್ದು, ವರ್ಗೀಕರಣ ಮಾರ್ಗಸೂಚಿಯನ್ನು ಈ ಸಿನಿಮಾ ಮೀರಿದೆ ಎಂದು ಇನ್ಫೋಕಾಮ್‌ ಮಿಡಿಯಾ ಡೆವಲಪ್‌ಮೆಂಟ್‌ ಅಥಾರಿಟಿ, ಸಂಸ್ಕೃತಿ, ಸಮುದಾಯ ಮತ್ತು ಯುವ ಸಚಿವಾಲಯ ಹಾಗೂ ಗೃಹ ಸಚಿವಾಲಯದ ಜಂಟಿ ಹೇಳಿಕೆ ತಿಳಿಸಿದೆ ಎಂದು ವರದಿಯಾಗಿದೆ.

ಕಾಶ್ಮೀರದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಹಿಂದೂಗಳಿಗೆ ಕಿರುಕುಳ ನೀಡಲಾಗಿದೆ. ಮುಸ್ಲಿಮರನ್ನು ಏಕಮುಖವಾಗಿ ಚಿತ್ರಿಸಲಾಗಿದೆ ಹಾಗೂ ಪ್ರಚೋದನಕಾರಿ ಅಂಶಗಳನ್ನು ಒಳಗೊಂಡಿದೆ ಎಂಬ ಕಾರಣ ಸಿನಿಮಾವನ್ನುತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ‘ಚಾನೆಲ್‌ ನ್ಯೂಸ್‌ ಏಷ್ಯಾ’ಗೆ ತಿಳಿಸಿದ್ದಾರೆ.

ADVERTISEMENT

1990ರ ಸಮಯದಲ್ಲಿ ಕಾಶ್ಮೀರ ಕಣಿವೆ ತೊರೆದ ಕಾಶ್ಮೀರಿ ಪಂಡಿತರ ಕುರಿತಾದ ನಿರ್ದೇಶಕ ವಿವೇಕ ಅಗ್ನಿಹೋತ್ರಿ ನಿರ್ದೇಶನದ ‘ದ ಕಾಶ್ಮೀರ್‌ ಫೈಲ್ಸ್’ ಸಿನಿಮಾವು ಮಾರ್ಚ್‌ನಿಂದ ಭಾರತದಲ್ಲಿ ಪ್ರದರ್ಶನವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.