ADVERTISEMENT

ಅನುರಾಧಾ ಪೊಡವಾಲ್ ನನ್ನ ತಾಯಿ: ಕೋರ್ಟ್ ಮೆಟ್ಟಿಲೇರಿದ ಕೇರಳದ ಮಹಿಳೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 6:23 IST
Last Updated 4 ಜನವರಿ 2020, 6:23 IST
ಅನುರಾಧಾ ಪೊಡವಾಲ್
ಅನುರಾಧಾ ಪೊಡವಾಲ್    

ತಿರುವನಂತಪುರ: ‘ಹಿನ್ನೆಲೆ ಗಾಯಕಿ ಅನುರಾಧಾ ಪೊಡವಾಲ್ ಅವರು ನನ್ನ ಹೆತ್ತ ತಾಯಿ. ಹುಟ್ಟಿದಾಗಲೇ ಅವರು ನನ್ನನ್ನು ದೂರ ಮಾಡಿದ್ದಾರೆ’ ಎಂದು ಹೇಳಿಕೊಂಡು ಕೇರಳದ ಮಹಿಳೆಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಜ.27ರಂದು ಪ್ರಕರಣದ ವಿಚಾರಣೆ ನಡೆಯುವ ವೇಳೆ, ಪೊಡವಾಲ್ ಹಾಗೂ ಅವರ ಇಬ್ಬರು ಮಕ್ಕಳು ಖುದ್ದು ಹಾಜರಾಗಬೇಕು ಎಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಅನುರಾಧಾ ಪೊಡವಾಲ್ ಅವರಿಗೆ ಸೂಚಿಸಿದೆ.

ಕರ್ಮಲಾ ಮೋಡೆಕ್ಸ್ ಎನ್ನುವವರು ಈ ಆರೋಪ ಮಾಡಿದ್ದು, ‘ನನ್ನ ಬಾಲ್ಯ ಹಾಗೂ ಜೀವನದ ಹಕ್ಕುಗಳನ್ನು ನಿರಾಕರಿಸಿದ್ದಕ್ಕಾಗಿ ಹೆತ್ತ ಪೋಷಕರು ₹ 50 ಕೋಟಿ ಪರಿಹಾರ ನೀಡಬೇಕು’ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

‘ಪೊಡವಾಲ್ ಅವರು 1974ರಲ್ಲಿ ಸಾಕುಪೋಷಕರಾದ ಪೊನ್ನಚ್ಚನ್ ಹಾಗೂ ಅಗ್ನೇಸ್‌ ಅವರಿಗೆ ನನ್ನನ್ನು ನೀಡಿದರು. ಆ ವೇಳೆಗೆ ಅವರು ವೃತ್ತಿಜೀವನದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರಿಂದ, ಮಗುವನ್ನು ಸಾಕಲು ಅವರಿಗೆ ಇಷ್ಟವಿರಲಿಲ್ಲ’ ಎಂದು ಮಾಧ್ಯಮದವರಿಗೆ ಕರ್ಮಲಾ ತಿಳಿಸಿದ್ದಾರೆ.

ಅನುರಾಧಾ ಪೊಡವಾಲ್ ಅವರು ಸಂಗೀತ ಸಂಯೋಜಕ ಅರುಣ್ ಪೊಡವಾಲ್ ಅವರನ್ನು ವಿವಾಹವಾಗಿದ್ದರು.

‘ಪೊನ್ನಚ್ಚನ್‌ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಕರ್ಮಲಾ ಅವರು ಅನುರಾಧಾ–ಅರುಣ್ ಪೊಡವಾಲ್ ಅವರಿಗೆ ಜನಿಸಿದ್ದು ಎನ್ನುವ ವಿಷಯವನ್ನು ತಮ್ಮ ಸಾವಿನ ಅಂಚಿನಲ್ಲಿದ್ದಾಗ ತಿಳಿಸಿದರು’ ಎಂದು ಕರ್ಮಲಾ ಅವರ ವಕೀಲರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.