ADVERTISEMENT

ಬಾಡಿಗೆ ತಾಯಿ ಮೂಲಕ ಸಲ್ಮಾನ್‌ಗೆ ಮಗು?

​ಪ್ರಜಾವಾಣಿ ವಾರ್ತೆ
Published 12 ಮೇ 2019, 19:30 IST
Last Updated 12 ಮೇ 2019, 19:30 IST
ಸಲ್ಮಾನ್‌
ಸಲ್ಮಾನ್‌   

ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎನಿಸಿಕೊಂಡಿರುವ ಸಲ್ಮಾನ್ ಖಾನ್‌ ಒಂದರ ಹಿಂದೊಂದು ಹಿಟ್ ಚಿತ್ರಗಳನ್ನು ನೀಡಿ ಜನಮನ ಗೆದ್ದವರು. ಅವರು ಚಿತ್ರರಂಗಕ್ಕೆ ಬಂದು ಮೂವತ್ತು ವರ್ಷಗಳು ಸಂದಿವೆ.ವಯಸ್ಸೂ 53 ದಾಟಿದ್ದರೂಇನ್ನೂ ಮದುವೆಯಾಗಿಲ್ಲ. ಹಾಗಂತ ಮದುವೆ, ಮಕ್ಕಳ ಬಗ್ಗೆ ಅವರಿಗೆ ಯೋಚನೆ ಇಲ್ಲ ಅಂತಲ್ಲ.

ಇದೀಗ ಬಂದಿರುವ ಸುದ್ದಿ ಎಂದರೆ, ಸಲ್ಮಾನ್ ಅವರು ತಂದೆಯಾಗಲು ಹೊರಟಿರುವುದು. ಅರೆ ಮದುವೆಯಾಗದೇ ತಂದೆ ಆಗೋದು ಹೇಗೆ ಎಂಬ ಅಚ್ಚರಿ ಮೂಡಬಹುದು. ಬಾಡಿಗೆ ತಾಯಿಯ ಮೂಲಕ ಅವರು ಮಗು ಪಡೆಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅವರ ಬಗ್ಗೆ ಎರಡು ವರ್ಷದ ಹಿಂದೆಯೂ ಇಂತಹದ್ದೇ ಸುದ್ದಿ ಹರಡಿತ್ತು.

ಮಕ್ಕಳೆಂದರೆ ಸಲ್ಮಾನ್‌ಗೆ ಅಚ್ಚುಮೆಚ್ಚು. ಆದರೆ ಮದುವೆಯ ಬಗ್ಗೆ ಅವರು ಮನಸು ಮಾಡಿಲ್ಲ. ಆದರೆ ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಇದು ನಿಜವಾದಲ್ಲಿ, ಶಾರುಕ್ ಖಾನ್, ಅಮೀರ್ ಖಾನ್, ಏಕ್ತಾ ಕಪೂರ್, ಕರಣ್ ಜೋಹರ್ ಸಾಲಿಗೆ ಬ್ಯಾಡ್‌ ಬಾಯ್ ಕೂಡಾ ಸೇರ್ಪಡೆಯಾಗಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.