ಖುಷಿ ರವಿ, ಪ್ರಣಮ್ ದೇವರಾಜ್
ಶ್ರೀಕಾಂತ್ ಹುಣಸೂರು ನಿರ್ದೇಶನದಲ್ಲಿ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ ‘S/O ಮುತ್ತಣ್ಣ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ‘ದಿಯಾ’ ಖ್ಯಾತಿಯ ಖುಷಿ ರವಿ ನಾಯಕಿಯಾಗಿ ನಟಿಸಿರುವ ಚಿತ್ರ ಸೆಪ್ಟೆಂಬರ್ 12ರಂದು ತೆರೆ ಕಾಣಲಿದೆ.
‘ಚಿತ್ರದಲ್ಲಿ ತಂದೆ ಪಾತ್ರದಲ್ಲಿ ನಟಿಸಿರುವ ರಂಗಾಯಣ ರಘು ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರು ನನ್ನ ತಂದೆಗೆ ಸಮಾನ. ಸೆಟ್‌ನಲ್ಲಿ ಸಾಕಷ್ಟು ತಪ್ಪುಗಳನ್ನು ತಿದ್ದಿ ನಟನೆ ಹೇಳಿಕೊಟ್ಟರು. ಒಂದು ಸುಂದರ ಅನುಭವ ನೀಡುವ ಚಿತ್ರವಿದು. ಖುಷಿ ರವಿ ಸೇರಿದಂತೆ ಎಲ್ಲರ ಅಭಿನಯ ಚೆನ್ನಾಗಿದೆ. ಛಾಯಾಚಿತ್ರಗ್ರಾಹಕ ಸ್ಕೇಟಿಂಗ್ ಕೃಷ್ಣ ಅವರು ಈ ಚಿತ್ರದಲ್ಲಿ ಕಾಶಿಯನ್ನೂ ತೋರಿಸಿರುವ ಪರಿ ಚೆನ್ನಾಗಿದೆ’ ಎಂದರು ಪ್ರಣಂ.
‘ಪ್ರಜ್ವಲ್ ಜೊತೆಗೆ ಅವರ ಮೊದಲ ಚಿತ್ರ ‘ಸಿಕ್ಸರ್’ ನಲ್ಲಿ ಅಭಿನಯಿಸಿದ್ದೆ. ಈಗ ಪ್ರಣಂ ಜತೆ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವೆ. ನಿರ್ದೇಶಕ ಶ್ರೀಕಾಂತ್ ಹುಣಸೂರು ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಉಳಿಯುವ ಲಕ್ಷಣಗಳು ಇವೆ. ತಂದೆ ಮಗನ ಬಾಂಧವ್ಯದ ಚಿತ್ರ ನೋಡಿ ಹೊರಬಂದಾಗ ಕಾಡುತ್ತದೆ’ ಎಂದರು ರಂಗಾಯಣ ರಘು.
ಪುರಾತನ ಫಿಲ್ಮ್ಸ್ ಬಂಡವಾಳ ಹೂಡಿದೆ. ‘ನಮ್ಮ ಚಿತ್ರ ಆಗಸ್ಟ್ 22 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ನಮ್ಮ ಚಿತ್ರ ನೋಡಿದ ಮಲಯಾಳ ವಿತರಕ ಶಾನ್, ಅಲ್ಲಿಯೂ ತೆರೆಗೆ ತರಲು ಮುಂದಾಗಿದ್ದಾರೆ. ಹಾಗಾಗಿ ನಮ್ಮ ಚಿತ್ರವನ್ನು ಚಿತ್ರವನ್ನು ಸೆಪ್ಟೆಂಬರ್ 12ರಂದು ಕನ್ನಡ, ತೆಲುಗು, ಮಲಯಾಳ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು ನಿರ್ದೇಶಕ ಶ್ರೀಕಾಂತ್ ಹುಣಸೂರು.
ಸಚಿನ್ ಬಸ್ರೂರ್ ಸಂಗೀತ, ಹರೀಶ್ ಕೊಮ್ಮೆ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.