ADVERTISEMENT

ನಟ ಸೋನು ಸೂದ್‌ಗೆ ಬುದ್ದಿವಾದ ಹೇಳಿದ ಉತ್ತರ ರೈಲ್ವೆ ವಲಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 7:38 IST
Last Updated 5 ಜನವರಿ 2023, 7:38 IST
ಸೋನು ಸೂದ್
ಸೋನು ಸೂದ್   

ದೆಹಲಿ: ನಟ ಸೋನು ಸೂದ್ ಅವರು ತಮ್ಮ ನಟನೆಯ ಜೊತೆ ಸಾಮಾಜಿಕ ಸೇವೆಯೊಂದಿಗೆ ಹೆಚ್ಚು ಜನಪ್ರಿಯರಾಗಿದ್ದಾರೆ. ಅಲ್ಲದೇ ವಿವಿಧ ವಿಷಯಗಳ ಕುರಿತು ಸಾಮಾಜಿಕ ಜಾಗೃತಿ ಮಾಡುವುದರಲ್ಲಿ ಮುಂದೆ ಇದ್ದಾರೆ.

ಆದರೆ, ಇತ್ತೀಚೆಗೆ ಅವರು ಮಾಡಿದ ಆ ಒಂದು ಕೆಲಸ ಟೀಕೆಗೆ ಒಳಗಾಗಿದ್ದಲ್ಲದೇ ಸೋನು ಸೂದ್ ಬೇರೆಯವರಿಂದ ಬುದ್ಧಿ ಹೇಳಿಸಿಕೊಳ್ಳುವ ಪರಿಸ್ಥಿತಿ ಬಂದೊಂದಗಿದೆ.

ಹೌದು, ಸೋನು , ಡಿಸೆಂಬರ್ 13 ರಂದು ದೆಹಲಿಯ ರೈಲ್ವೆಯಲ್ಲಿ ಪ್ರಯಾಣಿಸುತ್ತಿರುವಾಗ ರೈಲಿನ ಫುಟ್‌ ಬೋರ್ಡ್‌ ಬಳಿ ನಿಂತುಕೊಂಡಿದ್ದರು. ಕೆಲ ನಿಮಿಷ ಅಪಾಯಕಾರಿ ಎನ್ನುವಂತೆ ಕುಳಿತುಕೊಂಡಿದ್ದರು. ಈ ವಿಡಿಯೊ ಟ್ವಿಟರ್‌ನಲ್ಲಿ ಹರಿದಾಡಿತ್ತು.

ADVERTISEMENT

ಇದೀಗ ಉತ್ತರ ರೈಲ್ವೆ ವಲಯ ಈ ವಿಡಿಯೊ ಹಂಚಿಕೊಂಡು ಸೂನು ಅವರಿಗೆ ಬುದ್ಧಿವಾದ ಹೇಳಿದೆ. ‘ಪ್ರೀತಿಯ ಸೋನು ಸೂದ್ ಅವರೇ, ಲಕ್ಷಾಂತರ ಜನರಿಗೆ ನೀವು ಮಾದರಿಯಾಗಿದ್ದೀರಿ. ರೈಲು ಓಡುವಾಗ ಮೆಟ್ಟಿಲುಗಳ ಬಳಿ ನಿಂತು ಪ್ರಯಾಣಿಸುವುದು ಅಪಾಯಕಾರಿ, ಈ ರೀತಿಯ ವೀಡಿಯೊ ನಿಮ್ಮ ಅಭಿಮಾನಿಗಳಿಗೆ ತಪ್ಪು ಸಂದೇಶ ಕಳುಹಿಸಬಹುದು. ದಯವಿಟ್ಟು ಇದನ್ನು ಮಾಡಬೇಡಿ, ಸುಗಮ, ಸುರಕ್ಷಿತ ಪ್ರಯಾಣವನ್ನು ಆನಂದಿಸಿ’ ಎಂದು ತಿಳಿ ಹೇಳಿದೆ.

ಅಲ್ಲದೇ ಇದೇ ವಿಡಿಯೊ ಇಟ್ಟುಕೊಂಡು ಮುಂಬೈ ರೈಲ್ವೆ ಪೊಲೀಸ್ ಕಮಿಷನರ್ ಕೂಡ ಸೋನುಗೆ ತಿಳಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.