ADVERTISEMENT

ನಾನು ಭಾರತ ದೇಶದ ದೊಡ್ಡ ಅಭಿಮಾನಿ: ಹಾಲಿವುಡ್‌ ನಟ ಟಾಮ್ ಹಾಲೆಂಡ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 8:20 IST
Last Updated 16 ಫೆಬ್ರುವರಿ 2022, 8:20 IST
ಟಾಮ್ ಹಾಲೆಂಡ್‌
ಟಾಮ್ ಹಾಲೆಂಡ್‌   

ಹಾಲಿವುಡ್ ಸ್ಟಾರ್ ಟಾಮ್ ಹಾಲೆಂಡ್ ಅವರು ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದು ಆಗ್ರಾದಲ್ಲಿರುವ ತಾಜ್‌ಮಹಲ್‌ ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಟಾಮ್ ಹಾಲೆಂಡ್ ನಟಿಸಿರುವ 'ಅನ್‌ಚಾರ್ಟೆಡ್' ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಸುದ್ದಿ ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಸಿನಿಮಾ ಭಾರತದಲ್ಲೂ ಬಿಡುಗಡೆಯಾಗಲಿದೆ.

‘ನಾನು ಭಾರತದ ದೊಡ್ಡ ಅಭಿಮಾನಿಯಾಗಿರುವೆ. ಅಲ್ಲಿಗೆ ಹೋಗಲು ನನಗೆ ಇಲ್ಲಿಯವರೆಗೂ ಅವಕಾಶ ದೊರೆತಿಲ್ಲ. ಮುಂದೆ ಒಂದು ದಿನ ಅಲ್ಲಿಶೂಟಿಂಗ್‌ ಕೂಡ ಮಾಡುತ್ತೇನೆ, ಹಾಗೇ ಆಗ್ರಾದಲ್ಲಿರುವ ತಾಜ್‌ಮಹಲ್‌ ನೋಡುತ್ತೇನೆ’ಎಂದು ಹಾಲೆಂಡ್‌ ಹೇಳಿದ್ದಾರೆ.

ADVERTISEMENT

‘ನನ್ನ ಮೇಲಿನ ಪ್ರೀತಿ, ಅಭಿಮಾನ ಹಾಗೂ ನನ್ನ ಚಿತ್ರಗಳನ್ನು ಬೆಂಬಲಿಸುತ್ತಿರುವ ಭಾರತದಲ್ಲಿನ ನನ್ನ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದಿದ್ದಾರೆ

'ಅನ್‌ಚಾರ್ಟೆಡ್' ಸಿನಿಮಾ ಯುರೋಪ್‌ನ ಕೆಲದೇಶಗಳು ಸೇರಿದಂತೆ ಅಮೆರಿಕದಲ್ಲಿ ಫೆಬ್ರುವರಿ 18ರಂದು ಬಿಡುಗಡೆಯಾಗಲಿದೆ.

ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ಹಾಲೆಂಡ್‌ ಅಭಿನಯದ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಚಿತ್ರ ಭಾರತದಲ್ಲಿ ಹಿಟ್‌ ಆಗಿತ್ತು. ಭಾರತೀಯ ಪ್ರೇಕ್ಷಕರು ಹಾಲೆಂಡ್ ಅವರ ಈ ಸಿನಿಮಾವನ್ನು ಮೆಚ್ಚಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.