ADVERTISEMENT

ನಿರಂತರ ಸೆಕ್ಸ್‌ ಮಾಡಿದರೆ ಕೋವಿಡ್‌–19 ಬರಲ್ಲ: ಶ್ರೀರೆಡ್ಡಿಗೆ ನೆಟ್ಟಿಗರ ತರಾಟೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 13:20 IST
Last Updated 24 ಮಾರ್ಚ್ 2020, 13:20 IST
   
""

ಹೈದರಾಬಾದ್‌: ದಕ್ಷಿಣ ಭಾರತದಲ್ಲಿ ಪಾತ್ರಕ್ಕಾಗಿ ಪಲ್ಲಂಗ ಪ್ರಕರಣದ ಮೂಲಕ ಸದ್ದು ಮಾಡಿದ್ದ ತೆಲುಗು ನಟಿ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಮೂಲಕ ನೆಟ್ಟಿಗರ ಹಿಗ್ಗಾ ಮುಗ್ಗಾ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ.

ದೇಶದಲ್ಲಿ ಕೊರೊನಾ ಮಹಾಮಾರಿಗೆ ಇಡೀ ದೇಶವೇ ಲಾಕ್‌ಡೌನ್‌ ಆಗುವ ಭಿತೀಯಲ್ಲಿದೆ. ಈಗಾಗಲೇ ಕೆಲವು ರಾಜ್ಯಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ. ಪರಿಸ್ಥಿತಿ ಈ ರೀತಿ ಇರುವಾಗ ಶ್ರೀರೆಡ್ಡಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ
ನಿರಂತರ ಸೆಕ್ಸ್‌ ಮಾಡುವುದರಿಂದ ಕೊರೋನಾ ವೈರಸ್‌ ದೂರ ಮಾಡಬಹುದು, ಇದು ಸಾಬೀತಾಗಿದೆ (Constant sex kills corona virus, its proved) ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಶ್ರೀರೆಡ್ಡಿಯವರನ್ನು ಫುಲ್ ಕ್ಲಾಸ್‌ ತೆಗದುಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಶ್ರೀರೆಡ್ಡಿ ಈ ಪೋಸ್ಟ್ ಮಾಡಿದ್ದರು. ಇದಕ್ಕೆ ಸಾವಿರಾರು ಜನರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರಂತೂ ನೀವು ಈ ಅನುಭವವನ್ನು ಮಾಡಿಕೊಂಡಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ಶ್ರೀರೆಡ್ಡಿ ಕೊರೊನಾ ವೈರಸ್‍ಗೆ ಸ್ಪೆಷಲ್ ವೈದ್ಯೆಯಾಗಿದ್ದಾರೆ ಎಂದು ಬರೆದಿದ್ದಾರೆ.

ADVERTISEMENT

ಈಗಾಗಲೇ ಹೈದರಾಬಾದ್‌ ಪೊಲೀಸರು ಶ್ರೀರೆಡ್ಡಿ ವಿರುದ್ಧ ದೂರು ದಾಖಲಿಸಿದ್ದಾರೆ. ಆ ಪೋಸ್ಟ್ ಅನ್ನು ಶ್ರೀರೆಡ್ಡಿ ಡಿಲೀಟ್‌ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.