ADVERTISEMENT

Gowli Teaser: ಗೌಳಿಯಾಗಿ ಖಡಕ್ ಲುಕ್‌ನಲ್ಲಿ ಬೆರುಗುಗೊಳಿಸಿದ ಶ್ರೀನಗರ ಕಿಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2022, 7:13 IST
Last Updated 3 ಫೆಬ್ರುವರಿ 2022, 7:13 IST
ಗೌಳಿಯಲ್ಲಿ ಶ್ರೀನಗರ ಕಿಟ್ಟಿ
ಗೌಳಿಯಲ್ಲಿ ಶ್ರೀನಗರ ಕಿಟ್ಟಿ   

ಬೆಂಗಳೂರು: ನಟ ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರದಲ್ಲಿರುವ ‘ಗೌಳಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ಕಳೆದ ಕೆಲ ವರ್ಷಗಳಿಂದ ತೆರೆಮರೆಯಲ್ಲಿದ್ದ ಕಿಟ್ಟಿ ಅವರು ಗೌಳಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಭರ್ಜರಿಯಾಗಿ ಪುನಃ ಪ್ರವೇಶ ಮಾಡುತ್ತಿದ್ದಾರೆ ಎನ್ನಲಾಗಿದೆ.

ಪೋಟೊಗ್ರಾಫರ್ ಆಗಿದ್ದ ಸೂರಾ ಅವರು ಗೌಳಿ ಸಿನಿಮಾ ನಿರ್ದೇಶಿಸಿದ್ದಾರೆ. ಸೋಹಂ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿ ರಘು ಸಿಂಗಮ್ ನಿರ್ಮಿಸಿದ್ದಾರೆ.

ADVERTISEMENT

ರಂಗಾಯಣ ರಘು, ಪಾವನಾ ಗೌಡ ಮುಂತಾದವರು ತಾರಾ ಬಳಗದಲ್ಲಿದ್ದು, ಗೌಳಿ ಕುಟುಂಬವೊಂದರಲ್ಲಿ ನಡೆಯುವ ನೈಜ ಘಟನೆಯನ್ನಾಧರಿಸಿದ ಚಿತ್ರ ಇದಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಈ ಚಿತ್ರಕ್ಕೆ ಸಂದೀಪ್ ವಲ್ಲೂರಿ ಛಾಯಾಗ್ರಹಣವಿದ್ದು, ಶಶಾಂಕ್ ಶೇಷಗಿರಿ ಸಂಗೀತ ನೀಡಿದ್ದಾರೆ. ಗೌಳಿ ಬಿಡುಗಡೆ ದಿನಾಂಕ ಇನ್ನೂ ತಿಳಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.