ADVERTISEMENT

ಪಠಾಣ್ ಹಾಡಿಗೆ ವಿವಿ ಪ್ರಾಧ್ಯಾಪಕಿಯರ ನೃತ್ಯ: ಶೈಕ್ಷಣಿಕ ರಾಕ್‌ಸ್ಟಾರ್ಸ್ ಎಂದ SRK

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2023, 11:11 IST
Last Updated 21 ಫೆಬ್ರುವರಿ 2023, 11:11 IST
ಪ್ರಾಧ್ಯಾಪಕಿಯರ ನೃತ್ಯ
ಪ್ರಾಧ್ಯಾಪಕಿಯರ ನೃತ್ಯ   

ದೆಹಲಿ: ಇತ್ತೀಚೆಗೆ ಬಿಡುಗಡೆಯಾಗಿ ₹1000 ಕೋಟಿ ಕ್ಲಬ್ ಸೇರಿರುವ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಶಾರುಕ್ ಅಭಿಮಾನಿಗಳು ಸೇರಿದಂತೆ ಅನೇಕರು ಪಠಾಣ್ ಚಿತ್ರವನ್ನು ಮೆಚ್ಚಿಕೊಂಡಿದ್ದು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ಹಾಡುಗಳಂತೂ ಹಿಟ್ ಆಗಿವೆ.

ಈಗ ಇದೇ ಚಿತ್ರದ ‘ಜೂಮೆ ಜೊ ಪಠಾಣ್’ ಹಾಡಿಗೆ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯರು ಸಾರಿಯಲ್ಲಿ ತಮ್ಮ ವಿದ್ಯಾರ್ಥಿನಿಯರ ಜೊತೆ ನೃತ್ಯ ಮಾಡಿರುವ ವಿಡಿಯೊ ಗಮನ ಸೆಳೆದಿದ್ದು ಇದಕ್ಕೆ ಶಾರುಕ್ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ಈ ವಿಡಿಯೊವನ್ನು ಹಂಚಿಕೊಂಡಿರುವ ಶಾರುಕ್ ಖಾನ್, ‘ನಮಗೆ ಕಲಿಸುತ್ತ ನಮ್ಮೊಂದಿಗೆ ಖುಷಿಯಾಗಿರುವ ಶಿಕ್ಷಕರನ್ನು ಹೊಂದಿರುವುದು ನಮ್ಮ ಅದೃಷ್ಠ. ಇವರೆಲ್ಲ ಶೈಕ್ಷಣಿಕ ರಾಕ್‌ಸ್ಟಾರ್‌ಗಳು’ ಎಂದು ಹೇಳಿಕೊಂಡಿದ್ದಾರೆ.

ವಿವಿಯ ಕಾರ್ಯಕ್ರಮವೊಂದರಲ್ಲಿ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯರು ಇತ್ತೀಚೆಗೆ ನೃತ್ಯ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.