ADVERTISEMENT

ಕಾನ್‌ ಚಿತ್ರೋತ್ಸವಕ್ಕೆ ‘ಸನ್‌ಫ್ಲವರ್ಸ್ ವರ್‌ ದ ಫಸ್ಟ್ ಒನ್ಸ್‌ ಟು ನೋ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 22:57 IST
Last Updated 24 ಏಪ್ರಿಲ್ 2024, 22:57 IST
ಚಿದಾನಂದ ಎಸ್‌. ನಾಯಕ್
ಚಿದಾನಂದ ಎಸ್‌. ನಾಯಕ್   

ಮೈಸೂರು: ನಗರದ ಚಿದಾನಂದ ಎಸ್‌.ನಾಯಕ್ ನಿರ್ದೇಶನದ ಕಿರುಚಿತ್ರ ‘ಸನ್‌ಫ್ಲವರ್ಸ್ ವರ್‌ ದ ಫಸ್ಟ್ ಒನ್ಸ್‌ ಟು ನೋ’ ಪ್ರತಿಷ್ಠಿತ ಕಾನ್‌ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ (ಎಫ್‌ಟಿಐಐ) ಸಂಸ್ಥೆ ನಿರ್ಮಿಸಿರುವ ಈ ಕಿರುಚಿತ್ರದ ರಚನೆ ಹಾಗೂ ನಿರ್ದೇಶನ ಚಿದಾನಂದ್ ಅವರದ್ದು. ವಿ.ಮನೋಜ್‌– ಸಂಕಲನ, ಸೂರಜ್‌ ಠಾಕೂರ್‌– ಛಾಯಾಗ್ರಹಣ, ಅಭಿಷೇಕ್‌ ಕದಂ ಅವರ ಶಬ್ದವಿನ್ಯಾಸ ಚಿತ್ರಕ್ಕಿದೆ.

‘ನನ್ನ ಸಿನಿಮಾ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಿಕೊಂಡಿರುವುದು, 77ನೇ ಕಾನ್‌ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದನ್ನು ನಂಬಲಾಗುತ್ತಿಲ್ಲ. ನನ್ನ ಕನಸು ನಿಜವಾಗಿದೆ. ನನ್ನಲ್ಲಿ ನಂಬಿಕೆಯಿಟ್ಟು ಪ್ರೋತ್ಸಾಹಿಸಿದ ಎಲ್ಲರಿಗೂ ಹೃದಯಾಂತರಾಳದಿಂದ ಧನ್ಯವಾದ’ ಎಂದು ಚಿದಾನಂದ್‌ ‘ಪ್ರಜಾವಾಣಿ’ ಜೊತೆ ಬುಧವಾರ ಸಂತಸ ಹಂಚಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.