ADVERTISEMENT

ಮಕ್ಕಳು ಈ ರೀತಿ ಬದುಕಬೇಕಾಗಿರುವುದು ಬೇಸರದ ಸಂಗತಿ: ಸನ್ನಿ ಲಿಯೋನ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 11:35 IST
Last Updated 17 ಮಾರ್ಚ್ 2020, 11:35 IST
   

ಮುಂಬೈ: ಇಡೀ ವಿಶ್ವವೇ ಕೊರೊನಾ ವೈರಸ್‌ ಸೋಂಕಿನ ಭೀತಿಯಲ್ಲಿದೆ. ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ನನ್ನ ಮಕ್ಕಳು ಮಾಸ್ಕ್ ಹಾಕಿಕೊಳ್ಳಬೇಕಾಗಿರುವುದು ಬೇಸರದ ಸಂಗತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

ಮೂವರು ಮಕ್ಕಳೊಂದಿಗೆಸನ್ನಿ ಲಿಯೋನ್‌, ಪತಿ ಡೇನಿಯಲ್‌ ಮಾಸ್ಕ್‌ ಧರಿಸಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸನ್ನಿ, ನನ್ನ ಮಕ್ಕಳು ಹೀಗೆ ಬದುಕಬೇಕಾಗಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ.

ಇದು ಹೊಸ ಯುಗ, ನನ್ನ ಮಕ್ಕಳು ಈ ರೀತಿಯಾಗಿ ಮಾಸ್ಕ್‌ ಹಾಕಿಕೊಂಡಿರುವುದು ದುಃಖದ ಸಂಗತಿಯಾಗಿದೆ. ಈ ರೀತಿ ಇರುವುದು ಬಹು ಮುಖ್ಯವಾಗಿದೆ. ಈಗಾಗಲೇ ನಾನು ಮಕ್ಕಳಿಗೆ ಮಾಸ್ಕ್ ಧರಿಸುವುದನ್ನ ಅಭ್ಯಾಸ ಮಾಡಿಸುತ್ತಿದ್ದೇನೆ ಎಂದು ಬರೆದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.