
‘ಸಲಗ’ ಖ್ಯಾತಿಯ ದಿನೇಶ್ ನಿರ್ಮಿಸಿ, ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಸೂರಿ ಅಣ್ಣ’ ಚಿತ್ರದ ‘ನೀ ನನ್ನ ದೇವತೆ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
ಈ ಗೀತೆಗೆ ಕೆ.ಎಂ.ಇಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಒಬ್ಬ ಅಮಾಯಕ ತನ್ನ ಇಡೀ ಕುಟುಂಬ ಕಳೆದುಕೊಂಡಾಗ ಯಾವ ಮಟ್ಟಕ್ಕೆ ಹೋಗುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ದುಡುಕಬೇಡಿ, ಯಾರಿಗೂ ತಿರುಗಿ ಬೀಳಬೇಡಿ, ನಮ್ಮನ್ನೇ ನಂಬಿಕೊಂಡ ಕುಟುಂಬ ಇರುತ್ತದೆ ಎಂಬ ಸಂದೇಶವಿದೆ. ಈಗಾಗಲೇ ಚಿತ್ರ ಸೆನ್ಸಾರ್ ಆಗಿದೆ. ಕೆಲ ಭೂಗತ ದೊರೆಗಳು ನಮ್ಮ ಚಿತ್ರದ ಮೂಲಕ ಸಂದೇಶ ನೀಡಿರುವುದು ವಿಶೇಷ’ ಎಂದರು ನಿರ್ದೇಶಕ.
ಸಂಭ್ರಮಶ್ರೀ ನಾಯಕಿ. ರವಿ ಕಾಳೆ, ಹರೀಶ್ ರಾಯ್, ಕಾಕ್ರೋಜ್ ಸುಧೀ, ಪ್ರಕಾಶ್ ತೂಮಿನಾಡು, ಎಸ್ ಕೆ.ಉಮೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಕೆ.ಎಂ.ಇಂದ್ರ ಸಂಗೀತ, ಶ್ರೀಧರ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎಂ.ಬಿ.ಅಳಿಕಟ್ಟಿ ಛಾಯಾಚಿತ್ರಗ್ರಹಣ, ಎನ್.ಎಂ.ವಿಶ್ವ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.