ADVERTISEMENT

ತಂದೆಯ ಜನ್ಮದಿನಕ್ಕೆ ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ ಭಾವುಕ ಪೋಸ್ಟ್‌

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 10:18 IST
Last Updated 19 ಡಿಸೆಂಬರ್ 2021, 10:18 IST
ಸುಶ್ಮಿತಾ ಸೇನ್‌
ಸುಶ್ಮಿತಾ ಸೇನ್‌   

ನವದೆಹಲಿ: ತಂದೆ ಶುಬೀರ್ ಸೇನ್‌ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬಾಲಿವುಡ್‌ ನಟಿ ಸುಶ್ಮಿತಾ ಸೇನ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಈ ಫೋಟೊಗಳೊಂದಿಗೆ ತಂದೆಯ ಕುರಿತು ಭಾವುಕ ಬರಹವನ್ನು ಪೋಸ್ಟ್ ಮಾಡಿರುವ ಸುಶ್ಮಿತಾ ಸೇನ್‌, ‘ಹುಟ್ಟುಹಬ್ಬದ ಶುಭಾಶಯಗಳು ಬಾಬಾ. ಅತ್ಯಂತ ಪ್ರೀತಿಯ ಮತ್ತು ಕರುಣಾಮಯಿ ವ್ಯಕ್ತಿ ನೀವು. ನಿಮ್ಮ ಆರೋಗ್ಯ ಮತ್ತು ಸಂತೋಷಕ್ಕಾಗಿ ನಾನು ಯಾವಾಗಲೂ ಆಶಿಸುತ್ತೇನೆ. ನೀವು ನನ್ನ ತಂದೆಯಾಗಿರುವುದಕ್ಕೆ, ನನ್ನ ಮಕ್ಕಳಿಗೆ ತಾತನಾಗಿ ದೊರೆತಿರುವುದಕ್ಕೆ ನಾವೆಲ್ಲರೂ ಅದೃಷ್ಟವಂತರು‘ ಎಂದು ತಿಳಿಸಿದ್ದಾರೆ.

‘ನೀವು ಸ್ಪರ್ಶಿಸುವ ಜೀವಗಳಲ್ಲಿ ಭರವಸೆ ತುಂಬುತ್ತದೆ. ನಿಮ್ಮ ಮೌನ ಮತ್ತು ಸ್ಪೂರ್ತಿಗಳನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳಲು ಬಯಸುತ್ತೇನೆ. ನೀವು ಅದ್ಭುತ ವ್ಯಕ್ತಿ ಬಾಬಾ... ಐ ಲವ್‌ ಯು‘ ಎಂದು ಸುಶ್ಮಿತಾ ಬರೆದುಕೊಂಡಿದ್ದಾರೆ.

ADVERTISEMENT

1996ರಲ್ಲಿ ಬಿಡುಗಡೆಯಾದ ‘ದಸ್ತಕ್‌’ ಚಿತ್ರದಿಂದಸುಶ್ಮಿತಾ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದರು. 2010ರಲ್ಲಿ ‘ನೋ ಪ್ರಾಬ್ಲಮ್‌’ ಚಿತ್ರದ ನಂತರ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಅದಾದ ಬಳಿಕ‘ಆರ್ಯ’ ವೆಬ್‌ ಸಿರೀಸ್‌ ಮೂಲಕ ಮತ್ತೆ ನಟನೆಗೆಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.