ADVERTISEMENT

‘ಲವ್‌ ಮಾಕ್ಟೇಲ್‌’ ತೆಲುಗು ರಿಮೇಕ್‌ನಲ್ಲಿ ತಮನ್ನಾ ನಟನೆ

ಪ್ರಜಾವಾಣಿ ವಿಶೇಷ
Published 17 ಜುಲೈ 2020, 11:18 IST
Last Updated 17 ಜುಲೈ 2020, 11:18 IST
ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ   

ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ನಟಿಸಿದ್ದ ಕನ್ನಡದ ‘ಲವ್‌ ಮಾಕ್ಟೇಲ್‌’ ರೊಮ್ಯಾಂಟಿಕ್‌ ಆ್ಯಕ್ಷನ್‌ ಚಿತ್ರ. ಥಿಯೇಟರ್‌ನಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಒಟಿಟಿಯಲ್ಲಿ ಪ್ರಸಾರವಾದಾಗಲೂ ಜನರಿಂದ ಒಳ್ಳೆಯ ಸ್ಪಂದನೆ ಸಿಕ್ಕಿತ್ತು. ಹಾಗಾಗಿಯೇ, ಈ ಜೋಡಿ ‘ಲವ್‌ ಮಾಕ್ಟೇಲ್‌ 2’ ಚಿತ್ರಕ್ಕೆ ಸಿದ್ಧತೆ ನಡೆಸಿದೆ.

ಬಾಕ್ಸ್‌ಆಫೀಸ್‌ನಲ್ಲೂ ಒಳ್ಳೆಯ ಕಲೆಕ್ಷನ್‌ ಕಂಡ ಈ ಚಿತ್ರ ಈಗ ತೆಲುಗಿನಲ್ಲಿ ರಿಮೇಕ್‌ ಆಗುತ್ತಿದೆ. ‘ಮೈನಾ’ ಚಿತ್ರದ ಖ್ಯಾತಿಯ ನಿರ್ದೇಶಕ ನಾಗಶೇಖರ್ ರಿಮೇಕ್‌ಗೆ ಆ್ಯಕ್ಷನ್‌ ಹೇಳಲು ನಿರ್ಧರಿಸಿದ್ದಾರೆ. ಈ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಮೊದಲ ಹೆಜ್ಜೆ ಇಡುತ್ತಿರುವ ಖುಷಿಯಲ್ಲಿದ್ದಾರೆ.

ಕನ್ನಡದಲ್ಲಿ ಡಾರ್ಲಿಂಗ್‌ ಕೃಷ್ಣ ಅವರೇ ಈ ಚಿತ್ರ ನಿರ್ದೇಶಿಸಿದ್ದರು. ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ ನಟಿಸಿದ್ದ ಪಾತ್ರಗಳಲ್ಲಿ ತಮನ್ನಾ ಭಾಟಿಯಾ ಮತ್ತು ಸತ್ಯದೇವ್‌ ನಟಿಸಲಿದ್ದಾರಂತೆ. ಕಥೆಯ ಮೂಲ ಎಳೆಯನ್ನು ತೆಗೆದುಕೊಂಡು ತೆಲುಗಿನ ನೇಟಿವಿಟಿಗೆ ತಕ್ಕಂತೆ ಸಿನಿಮಾ ನಿರ್ದೇಶಿಸಲು ನಾಗಶೇಖರ್‌ ನಿರ್ಧರಿಸಿದ್ದಾರೆ.

ADVERTISEMENT

ಭವಾನಿ ರವಿ ಅವರೊಟ್ಟಿಗೆ ನಾಗಶೇಖರ್‌ ಕೂಡ ಇದಕ್ಕೆ ಬಂಡವಾಳ ಹೂಡಲಿದ್ದಾರೆ. ಸೆಪ್ಟೆಂಬರ್‌ 15ರಂದು ಶೂಟಿಂಗ್‌ ಶುರುವಾಗುವ ನಿರೀಕ್ಷೆಯಿದೆ. ಕೀರ್ವಾಣಿ ಅವರ ಪುತ್ರ ಕಾಳಭೈರವ ಸಂಗೀತ ಸಂಯೋಜಿಸಲಿದ್ದಾರೆ. ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.