
ಅಂಜು ಕೃಷ್ಣ
X
ಬೆಂಗಳೂರು: ಚೆನ್ನೈನಲ್ಲಿ ಡ್ರಗ್ಸ್ ಜಾಲವನ್ನು ತಮಿಳುನಾಡು ಪೊಲೀಸರು ಬೇಧಿಸಿದ್ದು, ಅದರಲ್ಲಿ ಯುವ ನಟಿಯೊಬ್ಬರ ಬಂಧನ ಆಗಿದೆ.
ಅಂಜು ಕೃಷ್ಣ ಎನ್ನುವ ನಟಿ ಹಾಗೂ ನಿರ್ದೇಶಕ ವಿನ್ಸಿತ್ ನಿವೇದ್ ಸೇರಿ 9 ಜನರನ್ನು ಪೊಲೀಸರ ಬಂಧಿಸಿದ್ದಾರೆ.
ಬಂಧಿತರು ಗಾಂಜಾ ಹಾಗೂ ಇನ್ನಿತರ ಮಾದಕ ಪದಾರ್ಥಗಳನ್ನು ಹೊಂದಿದ್ದರು. ಅಲ್ಲದೇ ಕೆಲವು ಕಡೆಗೆ ಪೂರೈಕೆ ಮಾಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಅವರನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಂಜು ಕೃಷ್ಣ ಅವರು ತಮಿಳಿನ ವೆಲ್ಲಿ ಮಾಲಾಯಿ, ಆವರೊ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಮಲಯಾಳಂನಲ್ಲೂ ಕೆಲ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.