ADVERTISEMENT

ಆಶಾ ಭೋಂಸ್ಲೆ ಒಡೆತನದ ರೆಸ್ಟೋರೆಂಟ್‌ನಲ್ಲಿ ಭೋಜನ ಸವಿದ ಟಾಮ್ ಕ್ರೂಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2021, 12:51 IST
Last Updated 23 ಆಗಸ್ಟ್ 2021, 12:51 IST
ಆಶಾ ರೆಸ್ಟೋರೆಂಟ್‌ನಲ್ಲಿ ಹಾಲಿವುಡ್‌ ನಟ ಟಾಮ್‌ ಕ್ರೂಸ್‌- ಟ್ವಿಟರ್‌ ಚಿತ್ರ
ಆಶಾ ರೆಸ್ಟೋರೆಂಟ್‌ನಲ್ಲಿ ಹಾಲಿವುಡ್‌ ನಟ ಟಾಮ್‌ ಕ್ರೂಸ್‌- ಟ್ವಿಟರ್‌ ಚಿತ್ರ   

ಹಾಲಿವುಡ್‌ನ ಸೂಪರ್‌ಸ್ಟಾರ್ ಟಾಮ್ ಕ್ರೂಸ್‌ ಅವರು ಬರ್ಮಿಂಗ್ ಹ್ಯಾಮ್ನಲ್ಲಿರುವ ಗಾಯಕಿ ಆಶಾ ಭೋಂಸ್ಲೆ ಒಡೆತನದ ರೆಸ್ಟೋರೆಂಟ್‌ಗೆ ತೆರಳಿ ಭೋಜನವನ್ನು ಸವಿದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಆಶಾ ಭೋಂಸ್ಲೆ, 'ಟಾಮ್ ಕ್ರೂಸ್ ಅವರು ಉತ್ತಮ ಭೋಜನದ ಅನುಭವವನ್ನು ಆನಂದಿಸಿದರು ಎಂದು ಕೇಳಿ ನನಗೆ ತುಂಬಾ ಸಂತೋಷವಾಯಿತು. ಅವರು ಶೀಘ್ರದಲ್ಲೇ ಮತ್ತೆ ನಮ್ಮ ರೆಸ್ಟೋರೆಂಟ್‌ಗೆ ಭೇಟಿ ನೀಡುವುದನ್ನು ಎದುರು ನೋಡುತ್ತಿದ್ದೇನೆ' ಎಂದು ತಿಳಿಸಿದ್ದಾರೆ.

ರೆಸ್ಟೋರೆಂಟ್‌ನ ಖಾದ್ಯಗಳನ್ನು ಇಷ್ಟಪಟ್ಟಿರುವ ಟಾಮ್‌ ಕ್ರೂಸ್‌ ಅವರು 'ಚಿಕನ್‌ ಟಿಕ್ಕಾ ಮಸಾಲಾ'ವನ್ನು ಎರಡು ಸಾರಿ ಆರ್ಡರ್‌ ಮಾಡಿದರು ಎಂದು ಆಶಾ ಅವರ ಜನರಲ್‌ ಮ್ಯಾನೇಜರ್ ನೌಮನ್ ಫಾರೂಕಿ ತಿಳಿಸಿದ್ದಾರೆ.

ADVERTISEMENT

ಟಾಮ್‌ ಕ್ರೂಸ್ ಅವರು 'ಮಿಷನ್: ಇಂಪಾಸಿಬಲ್ 7' ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.