ADVERTISEMENT

ಲಿಂಗಸಂವೇದನೆಯ ಸೂಕ್ಷ್ಮ ಚಿತ್ರಣ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 19:30 IST
Last Updated 25 ಆಗಸ್ಟ್ 2019, 19:30 IST
ತಮನ್ನ
ತಮನ್ನ   

ತೃತೀಯ ಲಿಂಗಿಗಳು ಹಾಗೂ ಸಲಿಂಗಕಾಮಿಗಳ ಜೀವನ, ತಲ್ಲಣಗಳನ್ನು ನೈಜವಾಗಿ ಚಿತ್ರಿಸಿರುವ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಅಪರೂಪ. ಆ ಸಾಂಪ್ರದಾಯಿಕ ಚೌಕ್ಕಟ್ಟನ್ನು ಮುರಿದು ಕನ್ನಡ, ತಮಿಳು, ಮಲಯಾಳ, ಬಂಗಾಳಿ, ಹಿಂದಿಯಲ್ಲಿ ಅವರ ಬಗೆಗಿನ ಸೂಕ್ಷ್ಮ ಚಿತ್ರಣಗಳನ್ನೊಳಗೊಂಡ ಕೆಲವು ಸಿನಿಮಾಗಳು ಬಿಡುಗಡೆಯಾಗಿವೆ.

ನರ್ತಕಿ (ತಮಿಳು)

ಈ ಚಿತ್ರವನ್ನು ನಿರ್ದೇಶನ ಮಾಡಿದವರು ಹಾಗೂ ಚಿತ್ರಕತೆ ಬರೆದವರು ವಿಜಯಪದ್ಮ. ಈ ಸಿನಿಮಾದಲ್ಲಿ ಕಲ್ಕಿ ಸುಬ್ರಹ್ಮಣ್ಯ, ವಿವಿನ್‌, ಗಿರೀಶ ಕಾರ್ನಾಡ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ತೃತೀಯ ಲಿಂಗಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುವ ಯುವಕನ ಕತೆ. ಹದಿಹರೆಯದ ಬಾಲಕನೊಬ್ಬ ತೃತೀಯಲಿಂಗಿಯಾಗಿ ಬದಲಾಗುವ, ತನ್ನ ಅಸ್ತಿತ್ವ ಕಂಡುಕೊಳ್ಳಲು ನಡೆಸುವ ಹೋರಾಟದಲ್ಲಿ ವಿಜಯಶಾಲಿಯಾಗುವ ಕತೆಯನ್ನು ಹೊಂದಿದೆ.

ADVERTISEMENT

ಕ್ವೀನ್ಸ್‌! ಡೆಸ್ಟಿನಿ ಆಫ್‌ ಡಾನ್ಸ್‌ (ಹಿಂದಿ)

ಈ ಸಾಮಾಜಿಕ ಚಿತ್ರವನ್ನು ಡೇವಿಡ್‌ ಅಟ್ಕಿನ್ಸ್‌ ನಿರ್ದೇಶಿಸಿದ್ದಾರೆ. ಇದರಲ್ಲಿ ಸೀಮಾ ಬಿಸ್ವಾಸ್‌, ವಿನೀತ್‌, ಲಕ್ಷ್ಮಿ ನಾರಾಯಣ್‌ ತ್ರಿಪಾಠಿ, ಅರ್ಚನಾ ಗುಪ್ತಾ ಮೊದಲಾದವರು ನಟಿಸಿದ್ದಾರೆ. ತೃತೀಯ ಲಿಂಗಿಗಳ ಜೀವನ ಹಾಗೂಅವರು ಎದುರಿಸುವ ಸವಾಲುಗಳನ್ನು ಈ ಚಿತ್ರ ಕಟ್ಟಿಕೊಟ್ಟಿದೆ. ತೃತೀಯ ಲಿಂಗಿಗಳ ಜೀವನದ ಬಗ್ಗೆ ಜನಸಾಮಾನ್ಯರಿಗೆ ಗೊತ್ತಿರದ ಅನೇಕ ಸಂಗತಿಗಳನ್ನು ಈ ಚಿತ್ರ ತಿಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.