ADVERTISEMENT

6 ಭಾಷೆಗಳಲ್ಲಿ ತುಳು ಸಿನಿಮಾ ‘21 ಗ್ರ್ಯಾಮ್ಸ್’

ತುಳುವಿನಿಂದ ಆರು ಭಾಷೆಗೆ ಡಬ್ ಆಗಲಿದೆ ಸಿನಿಮಾ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 15:14 IST
Last Updated 26 ಡಿಸೆಂಬರ್ 2020, 15:14 IST
ಮಂಗಳೂರಿನ ಕಡಲ ತೀರದಲ್ಲಿ ಅಬ್ಬಕ್ಕ ಕ್ರೂಸ್‌ನಲ್ಲಿ ಶನಿವಾರ ‘21 ಗ್ರಾಮ್ಸ್‌’ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿತು
ಮಂಗಳೂರಿನ ಕಡಲ ತೀರದಲ್ಲಿ ಅಬ್ಬಕ್ಕ ಕ್ರೂಸ್‌ನಲ್ಲಿ ಶನಿವಾರ ‘21 ಗ್ರಾಮ್ಸ್‌’ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿತು   

ಮಂಗಳೂರು: ತುಳು ಭಾಷೆಯಲ್ಲಿ ನಿರ್ಮಾಣಗೊಳ್ಳಲಿರುವ ‘21 ಗ್ರಾಮ್ಸ್‌’ ಮನೋವೈಜ್ಞಾನಿಕ ರೋಮಾಂಚನಕಾರಿ ಸಿನಿಮಾವು ಆರು ಭಾಷೆಗಳಿಗೆ ಡಬ್ ಆಗಲಿದೆ.

ತುಳು ಸಿನಿಮಾ ಏಕಕಾಲದಲ್ಲಿ ಆರು ಭಾಷೆಗೆ ಡಬ್ ಆಗಿ, ಆಯಾ ರಾಜ್ಯದಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುವ ಪ್ರಯತ್ನವು ಇದೇ ಮೊದಲು. ಕನ್ನಡ, ಹಿಂದಿ , ತಮಿಳು, ತೆಲುಗು, ಮರಾಠಿ ಮತ್ತು ಇಂಗ್ಲಿಷ್ ಭಾಷೆಗೆ ಡಬ್ ಆಗಲಿದೆ. ಸೋಚ್ ಸಿನಿಮಾ, ಎಲ್.ಎಸ್.ಮೀಡಿಯಾ, ಓಂ ಸ್ಟುಡಿಯೊ ಸಿನಿಮಾ ನಿರ್ಮಿಸುತ್ತಿದೆ’ ಎಂದು ಕಡಲ ತೀರದಲ್ಲಿ ಶನಿವಾರ ಅಬ್ಬಕ್ಕ ಕ್ವೀನ್ ಕ್ರೂಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಸ್ಟೀಫನ್ ಮಾಹಿತಿ ನೀಡಿದರು.

‘ಕಳೆದ ಹದಿನೈದು ವರ್ಷಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಸಹ ನಿರ್ದೇಶಕನಾಗಿ ದುಡಿದಿದ್ದೇನೆ. ಉತ್ತರ ಪ್ರದೇಶ, ಜಾರ್ಖಂಡ್‌, ಮಂಗಳೂರು, ಕುಂದಾಪುರ, ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ಚಿತ್ರೀಕರಣ ನಡೆಯಲಿದೆ’ ಎಂದು ಅವರು ವಿವರಿಸಿದರು.

ADVERTISEMENT

ನಟ ಅಮಿತ್ ರಾವ್ ಮಾತನಾಡಿ, ‘ಸಿನಿಮಾ ಆರಂಭದಿಂದ ಕೊನೆ ಕ್ಷಣದ ತನಕ ನಿಗೂಢ ಆಗಿರಲಿದೆ. ಮನೋವೈಜ್ಞಾನಿಕ ಭೂಮಿಕೆಯೇ ಸಿನಿಮಾದ ವಿಶೇಷ. ಈ ಸಿನಿಮಾಕ್ಕಾಗಿಯೇ ನನ್ನ ಕೇಶ ವಿನ್ಯಾಸ ಬದಲಾಯಿಸಿಕೊಂಡಿದ್ದೇನೆ’ ಎಂದರು.

ಎಲ್.ಎಸ್.ಮೀಡಿಯಾದ ಆಡಳಿತ ನಿರ್ದೇಶಕ ಲಕ್ಷ್ಮಣ್ ಸುವರ್ಣ ಮಾತನಾಡಿ, ‘ತುಳುವರು ಎಲ್ಲ ಭಾಷೆಗಳ ಸಿನಿಮಾಗಳನ್ನು ಮುಕ್ತವಾಗಿ ಸ್ವೀಕರಿಸುತ್ತಾರೆ. ತುಳುವರ ಸಿನಿಮಾಗಳನ್ನು ಎಲ್ಲ ಭಾಷಿಗರು ಪ್ರೀತಿಯಿಂದ ಸ್ವೀಕರಿಸುತ್ತಾರೆ’ ಎಂದರು.

ನಿರ್ಮಾಪಕ ಅವಿನಾಶ್ ಶೆಟ್ಟಿ, ನಿರ್ಮಾಪಕಿ ಹಾಗೂ ಬಹು ಭಾಷ ನಟಿ ಸೋನಲ್ ಮೊಂತೆರೊ, ನಿರ್ಮಾಪಕ ಚರಣ್ ಸುವರ್ಣ, ವಸ್ತ್ರ ವಿನ್ಯಾಸಕಿ ರಶ್ಮಿ ಅನೂಪ್ ರಾವ್, ಅನುಪಮ ಸುವರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.