ADVERTISEMENT

‘ಗಮ್ಜಾಲ್‌’ ಚಿತ್ರ ಫೆ.19ರಂದು ತೆರೆಗೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 13:01 IST
Last Updated 22 ಜನವರಿ 2021, 13:01 IST
ಗಮ್ಜಾಲ್‌ ಚಿತ್ರದ ಪೋಸ್ಟರ್‌
ಗಮ್ಜಾಲ್‌ ಚಿತ್ರದ ಪೋಸ್ಟರ್‌   

ಮಂಗಳೂರು: ‘ಗಿರಿಗಿಟ್‌’ ಖ್ಯಾತಿಯ ರೂಪೇಶ್‌ ಶೆಟ್ಟಿ ತಂಡದ ಮತ್ತೊಂದು ಬಹುನಿರೀಕ್ಷಿತ ‘ಗಮ್ಜಾಲ್‌’ ತುಳು ಚಿತ್ರ ಫೆ. 19ರಂದು ಕರಾವಳಿಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಒಂದು ವರ್ಷದ ನಂತರ ಬಿಡುಗಡೆಯಾಗಲಿರುವ ಮೊದಲ ತುಳು ಸಿನಿಮಾ ಇದಾಗಿದೆ. ಲಾಕ್‌ಡೌನ್‌ ಬಳಿಕ ಕರಾವಳಿಯ ಬಹುತೇಕ ಚಿತ್ರಮಂದಿರಗಳು ಸ್ತಬ್ಧವಾಗಿತ್ತು. ಗಮ್ಜಾಲ್‌ ಸಿನಿಮಾದ ಮೂಲಕ ಮತ್ತೆ ಒಂಟಿ ಪರದೆಯ ಥಿಯೇಟರ್‌ಗಳಲ್ಲಿ ಚಟುವಟಿಕೆಗಳು ಗರಿಗೆದರಲಿವೆ.

ಈ ಚಿತ್ರಕ್ಕೆ ಸುಮನ್‌ ಸುವರ್ಣ ಮತ್ತು ನವೀನ್‌ ಶೆಟ್ಟಿ ಆ್ಯಕ್ಷನ್‌ಕಟ್‌ ಹೇಳಿದ್ದಾರೆ. ರೂಪೇಶ್‌ ಶೆಟ್ಟಿ ಅವರ ಚಿತ್ರಕಥೆಗೆ ಪ್ರಸನ್ನ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ. ಶೂಲಿನ್‌ ಫಿಲ್ಮ್ಸ್‌ ಮತ್ತು ಮೊಗರೋಡಿ ಕನ್‌ಸ್ಟ್ರಕ್ಷನ್ ಚಿತ್ರಕ್ಕೆ ಬಂಡವಾಳ ಹಾಕಿದೆ.

ADVERTISEMENT

‘ಗಮ್ಜಾಲ್‌’ ಚಿತ್ರದಲ್ಲಿ ರೂಪೇಶ್‌ ಶೆಟ್ಟಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ಕೋಸ್ಟಲ್‌ವುಡ್‌ನ ಹಿರಿಯ ಕಲಾವಿದರಾದ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ಉಮೇಶ್‌ ಮಿಜಾರ್‌, ಪ್ರಸನ್ನ ಶೆಟ್ಟಿ,ಸಂದೀಪ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.

ರೂಪೇಶ್‌ ಶೆಟ್ಟಿ ತಂಡದ ‘ಗಿರಿಗಿಟ್‌’ ಚಿತ್ರವೂ ತುಳು ಚಿತ್ರರಂಗದಲ್ಲಿ ಹಲವು ದಾಖಲೆ ನಿರ್ಮಿಸಿತ್ತು. ಇದೀಗ ಲಾಕ್‌ಡೌನ್‌ ನಂತರ ತಯಾರಾದ ‘ಗಮ್ಜಾಲ್‌’ ಸಿನಿಮಾ ತುಳುಚಿತ್ರ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.