ADVERTISEMENT

ಟ್ವಿಟರ್‌ನಲ್ಲಿ ಟ್ರೆಂಡ್‌: ಸುಶಾಂತ್‌ ಸಿಂಗ್ ಪ್ರಕರಣಕ್ಕೆ ಸಿಬಿಐ ಇತಿಶ್ರೀ?

ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 11:48 IST
Last Updated 23 ಮಾರ್ಚ್ 2021, 11:48 IST
ಸುಶಾಂತ್‌
ಸುಶಾಂತ್‌   

ನಟ ದಿವಂಗತ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿಗೆ ಸಂಬಂಧಿಸಿ ಹೇಳಿಕೆಯೊಂದು ಸುಶಾಂತ್ ಲವರ್‌ ಹೆಸರಿನ ಟ್ವಿಟರ್‌ಖಾತೆಯಲ್ಲಿ ಟ್ರೆಂಡ್‌ ಆಗಿದೆ.

ಸಿಬಿಐ ಸುಶಾಂತ್‌ ಸಿಂಗ್ ರಜಪೂತ್‌ ಕೊಲೆ ಪ್ರಕರಣವನ್ನು ಮುಕ್ತಾಯಗೊಳಿಸಿದೆ (Miss you so much Anni... CBI Conclude SSR Murder) ಎಂಬ ಸಂದೇಶ ಸುಶಿ ಲವ್ವರ್‌ ಹೆಸರಿನ ಖಾತೆಯಿಂದ ಹರಿದಾಡುತ್ತಿದೆ. ಅದಕ್ಕೆ ನೂರಾರು ಮಂದಿ ರಿಟ್ವೀಟ್‌ ಮಾಡಿದ್ದಾರೆ.

ದಿವಂಗತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಟನೆಯ ‘ಚಿಚೋರೆ’ ಚಿತ್ರವು ಅತ್ಯುತ್ತಮ ಹಿಂದಿ ಚಿತ್ರವೆಂದು ಘೋಷಣೆ ಆದ ಮರುದಿನ ಈ ಸಾಲು ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಇದ್ದಕ್ಕಿದ್ದಂತೆಯೇ ಈ ಹೆಸರಿನ ಖಾತೆ (ಸುಶಾಂತ್‌ ಲವರ್‌) ಹೇಗೆ ಸೃಷ್ಟಿಯಾಯಿತು? ಅದರ ಬ್ಯಾಕ್‌ ಅಪ್‌ ಯಾರ ಬಳಿ ಇತ್ತು ಎಂಬ ಕುತೂಹಲದ ಪ್ರಶ್ನೆಯನ್ನೂ ಹಲವರು ಎತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.