ಪ್ರೈಂ ವಿಡಿಯೊದಿಂದ ‘Two Much with Kajol and Twinkle’ ಹೊಸ ಟಾಕ್ ಶೋ
ಮುಂಬೈ: ಅಮೆಜಾನ್ ಪ್ರೈಂ ವಿಡಿಯೊದಿಂದ ‘ಟು ಮಚ್ ವಿತ್ ಕಾಜೋಲ್ ಆ್ಯಂಡ್ ಟ್ವಿಂಕಲ್’ ("Two Much with Kajol and Twinkle") ಎಂಬ ಹೊಸ ಟಾಕ್ ಶೋ ಘೋಷಣೆಯಾಗಿದೆ.
ಶೀಘ್ರದಲ್ಲೇ ಈ ಶೋನ ಅವತರಣಿಕೆಗಳು ವೀಕ್ಷಕರಿಗೆ ಲಭ್ಯವಾಗಲಿವೆ ಎಂದು ಪ್ರೈಂನ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಬಾಲಿವುಡ್‌ನ ಜನಪ್ರಿಯ ನಟಿಯರಾದ ಕಾಜೋಲ್ ಹಾಗೂ ಟ್ವಿಂಕಲ್ ಖನ್ನಾ ಅವರು ‘ಟು ಮಚ್ ವಿತ್ ಕಾಜೋಲ್ ಆ್ಯಂಡ್ ಟ್ವಿಂಕಲ್’ ಟಾಕ್ ಶೋ ನಡೆಸಿಕೊಡಲಿದ್ದಾರೆ. ಬಾಲಿವುಡ್‌ನ ಅನೇಕ ಖ್ಯಾತನಾಮರು ಈ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.
ಈ ಶೋ ಅನ್ನು ಬನಜಿಯಾ ಆಸಿಯಾ ಅವರು ಅವರು ಪರಿಕಲ್ಪಿಸಿ ನಿರ್ದೇಶಿಸುತ್ತಿದ್ದಾರೆ.
‘ಟು ಮಚ್ ವಿತ್ ಕಾಜೋಲ್ ಆ್ಯಂಡ್ ಟ್ವಿಂಕಲ್ ಶೋ ಅನ್ ಫಿಲ್ಟರ್ಡ್ ಆಗಿರುತ್ತದೆ. ವೀಕ್ಷಕರಿಗೆ ಹೊಸ ಅನುಭೂತಿ ನೀಡುತ್ತದೆ. ಭಾರತೀಯ ಮನರಂಜನೆ ಕ್ಷೇತ್ರದಲ್ಲಿ ಹೊಸ ನೋಟ ಬೀರಲು ಕಾರಣವಾಗುತ್ತದೆ ಎಂದು ಅಮೆಜಾನ್ ಪ್ರೈಂ ಒರಿಜಿನಲ್ಸ್ ವಿಭಾಗದ ಮುಖ್ಯಸ್ಥ ನಿಖಿಲ್ ಮಾಡೋಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.