ADVERTISEMENT

ನಟ ಉಮೇಶ್‌ ಕೊನೆಯದಾಗಿ ನಟಿಸಿದ ‘ರಥಸಪ್ತಮಿ’ ಧಾರಾವಾಹಿ ಡಿ.8ರಿಂದ ಪ್ರಸಾರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 0:08 IST
Last Updated 6 ಡಿಸೆಂಬರ್ 2025, 0:08 IST
ಜೀವನ್‌, ಮೌಲ್ಯ 
ಜೀವನ್‌, ಮೌಲ್ಯ    

ನಟ ಉಮೇಶ್‌ ಅವರು ನಟಿಸಿದ್ದ ಕೊನೆಯ ಧಾರಾವಾಹಿ ‘ರಥಸಪ್ತಮಿ’ ಡಿ.8ರಿಂದ ಉದಯ ಟಿ.ವಿ.ಯಲ್ಲಿ ಪ್ರಸಾರವಾಗಲಿದೆ. 

ಡಿ.8ರಿಂದ ಪ್ರತಿ ಸೋಮವಾರದಿಂದ ಶನಿವಾರ ಸಂಜೆ 6 ಗಂಟೆಗೆ ಈ ಧಾರಾವಾಹಿ ಬರಲಿದ್ದು, ರಂಗಭೂಮಿ ಹಿನ್ನೆಲೆಯ ನಟ, ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ನಿರ್ದೇಶಿಸುತ್ತಿದ್ದಾರೆ. ನಾಯಕನಾಗಿ ಜೀವನ್, ನಾಯಕಿಯಾಗಿ ಮೌಲ್ಯಾ ಗೌಡ ಬಣ್ಣಹಚ್ಚಿದ್ದು,  ಉಳಿದಂತೆ ನಾಗೇಶ್ ಮಯ್ಯ, ಸುನಿಲ್, ವಂದನ, ಭೂಮಿಕಾ, ಪುಷ್ಪಾ ಬೆಳವಾಡಿ, ಪ್ರಮೀಳಾ, ಸುಮೋಕ್ಷ, ಮಧುಸೂದನ್, ನೀನಾಸಂ ಪ್ರದೀಪ್, ಚಂದನ, ಅಥರ್ವ ಮುಂತಾದವರು ಅಭಿನಯಿಸಿದ್ದಾರೆ. ಕೃಷ್ಣ ಅವರ ಛಾಯಾಚಿತ್ರಗ್ರಹಣ, ವಿಶಾಲ್ ವಿನಾಯಕ್ ಸಂಕಲನ ಧಾರಾವಾಹಿಗಿದೆ. ಆರಂಭಿಕ ಕಂತುಗಳಲ್ಲಿ ನಟ ಉಮೇಶ್ ನಟಿಸಿದ್ದಾರೆ. 

ನಿಸ್ವಾರ್ಥ ಹಾಗೂ ಉದಾರ ಮನೋಭಾವದ, ಮಧ್ಯಮ ವರ್ಗದ ಪದವಿ ಮುಗಿಸಿರುವ ಹುಡುಗಿ ಸಪ್ತಮಿ. ಈಕೆಗೆ ಶ್ರೀಮಂತ್ ಎನ್ನುವ ಒಬ್ಬ ಜಿಪುಣನ ಜೊತೆ ಮದುವೆ ನಿಶ್ಚಯವಾಗುತ್ತದೆ. ಇವರ ಬದುಕಿನ ಕಥೆಯೇ ‘ರಥಸಪ್ತಮಿ’. ಸ್ಟೋರಿ ಬ್ರೀವ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಹ್ಯಾರಿಸ್ ಇದನ್ನು ನಿರ್ಮಾಣ ಮಾಡಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.