ADVERTISEMENT

ರೈತರೇ ನಿಮ್ಮ ಬೆಳೆ, ಬೆಲೆ ತಿಳಿಸಿ: ಅಸಹಾಯಕರಿಗೆ ನೆರವಾಗಲು ಉಪೇಂದ್ರ ಯೋಜನೆ

ಲಾಕ್‌ಡೌನ್‌ ಅಸಹಾಯಕರಿಗೆ ನೆರವಾಗಲು ಉಪ್ಪಿ ಯೋಜನೆ

​ಪ್ರಜಾವಾಣಿ ವಾರ್ತೆ
Published 15 ಮೇ 2021, 9:34 IST
Last Updated 15 ಮೇ 2021, 9:34 IST
ಉಪೇಂದ್ರ (ಪ್ರಜಾವಾಣಿ ಚಿತ್ರ)
ಉಪೇಂದ್ರ (ಪ್ರಜಾವಾಣಿ ಚಿತ್ರ)   

ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ನೆರವಾಗಲು ನಟ ಉಪೇಂದ್ರ ಅವರು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ.

ರೈತರು ಬೆಳೆದ ಬೆಳೆ, ‍ಪ್ರಮಾಣದ ಮಾಹಿತಿ ಕೇಳಿರುವ ಅವರು, ಅದರ ಅಂತಿಮ ಬೆಲೆ ಹಾಗೂ ಸಾಗಾಟದ ವೆಚ್ಚವನ್ನು ತಿಳಿಸುವಂತೆ ಕೋರಿದ್ದಾರೆ.

ಅವರ ಟ್ವಿಟರ್‌ ಸಂದೇಶ ಹೀಗಿದೆ.

ADVERTISEMENT

ರೈತರು ಹಂಚಿಕೊಳ್ಳಬೇಕಾದ ಮಾಹಿತಿ
1.ನೀವು ಬೆಳೆದ ಬೆಳೆ ಯಾವುದು ?
2.ಆ ಬೆಳೆ ಎಷ್ಟು ಕೆಜಿ/ ಕ್ವಿಂಟಲ್ ಇದೆ ?
3.ಅದರ ಅಂತಿಮ ಬೆಲೆ ಎಷ್ಟು ?
4.ಅದನ್ನು ಬೆಂಗಳೂರಿಗೆ ಸಾಗಿಸಲು ಸಾರಿಗೆ ವೆಚ್ಚ ಎಷ್ಟು? ಈ ವಿವರಗಳನ್ನು ದಯವಿಟ್ಟು ಕಳಿಸಿಕೊಡಿ.
5.ವಾಟ್ಸ್ ಆ್ಯಪ್‌ ನಂಬರ್ +91 98457 63396.

ಮತ್ತೊಂದು ಟ್ವೀಟ್‌ನಲ್ಲಿ,

ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ....
ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ.
ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ( 24 ಮೇ 2021ರ ಒಳಗೆ )
ಮೊಬೈಲ್‌ ಸಂಖ್ಯೆ: 9845763396

ಅವರ ಟ್ವಿಟರ್‌ ಸಂದೇಶಕ್ಕೆ ನೂರಾರು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ರೈತರು ಟ್ವಿಟರ್ ಬಳಸುವುದು ತೀರಾ ಕಡಿಮೆ. ಆದ್ದರಿಂದ ಯಾವ ಉದ್ದೇಶಕ್ಕೆ ಈ ಮಾಹಿತಿ ಎಂದು ತಿಳಿಸಿ. ಆಗ ರೈತರಿಗೆ ಗೊತ್ತಾಗುತ್ತದೆ. ಇಲ್ಲವಾದರೆ ರೈತರ ಪರವಾಗಿ ಬೇರೆಯವರು ಮಾಹಿತಿ ಕೊಡುತ್ತಾರೆ. ಅದು ವಸ್ತುನಿಷ್ಠವಾಗಿ ಇರುತ್ತದೆ ಎಂದು ಹೇಳಲು ಆಗುವುದಿಲ್ಲ’. ಎಂದೂ ಕೆಲವರು ಸಲಹೆ ನೀಡಿದ್ದಾರೆ.

ಕೆಲವು ರೈತರು ಟೊಮೆಟೋವನ್ನು ರಸ್ತೆಗೆ ಚೆಲ್ಲಿದ ಫೋಟೋವನ್ನು ಹಂಚಿಕೊಂಡು ರಿಟ್ವೀಟ್‌ ಮಾಡಿದ್ದಾರೆ.

ರೈತರಿಂದ ನೇರವಾಗಿ ಬೆಳೆ ಖರೀದಿಸಿ ಅಗತ್ಯವುಳ್ಳವರಿಗೆ ಹಂಚುವ ಯೋಜನೆ ಬಗ್ಗೆ ಗುರುವಾರ ಉಪೇಂದ್ರ ಅವರು ಹೇಳಿದ್ದರು. ಅವರ ಯೋಜನೆಗೆ ಹಲವಾರು ಮಂದಿ ಧನಸಹಾಯ ನೀಡಿ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.