ADVERTISEMENT

ಮುಂಬೈ ಪೊಲೀಸರ ನಕಲಿ ವೇಷದಲ್ಲಿ ವಿಡಿಯೊ: ನಟಿ ಊರ್ಫಿ ಜಾವೇದ್‌ ವಿರುದ್ಧ ಪ್ರಕರಣ

ಬಂಧನದ ನಕಲಿ ವಿಡಿಯೊ ಮೂಲಕ ಮುಂಬೈ ಪೊಲೀಸರ ಮಾನಹಾನಿ ಮಾಡಿದ ಆರೋಪದ ಮೇಲೆ ಉರ್ಫಿ ಜಾವೇದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ನವೆಂಬರ್ 2023, 3:23 IST
Last Updated 4 ನವೆಂಬರ್ 2023, 3:23 IST
<div class="paragraphs"><p>ಊರ್ಫಿ ಜಾವೇದ್‌</p></div>

ಊರ್ಫಿ ಜಾವೇದ್‌

   

ಫೋಟೊ ಕೃಪೆ ಎಕ್ಸ್‌

ಮುಂಬೈ: ನಟಿ ಹಾಗೂ ಮಾಡೆಲ್‌ ಉರ್ಫಿ ಜಾವೇದ್‌ ಅವರನ್ನು ಶುಕ್ರವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ಮುಂಬೈ ಪೊಲೀಸರ ವೇಷದಲ್ಲಿ ಬಂಧನದ ನಕಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಉರ್ಫಿ ತಮ್ಮ ಇಮೇಜ್ ಅನ್ನು ಹಾಳು ಮಾಡಿದ್ದಾರೆ ಎಂದು ಮುಂಬೈ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

'ಅಶ್ಲೀಲತೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ ಎನ್ನಲಾದ ವೈರಲ್ ವಿಡಿಯೊ ನಿಜವಲ್ಲ. ಚಿಹ್ನೆ ಮತ್ತು ಸಮವಸ್ತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಅಗ್ಗದ ಪ್ರಚಾರಕ್ಕಾಗಿ ದೇಶದ ಕಾನೂನನ್ನು ಉಲ್ಲಂಘಿಸುವಂತಿಲ್ಲ. ಜನರ ದಾರಿತಪ್ಪಿಸುವ ವಿಡಿಯೊದಲ್ಲಿ ಭಾಗಿಯಾಗಿರುವವರ ವಿರುದ್ಧ ಐಪಿಸಿ ಸೆಕ್ಷನ್ 171, 419, 500, 34 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ' ಎಂದು ಮುಂಬೈ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತುಂಡುಡುಗೆಗಳನ್ನು ಧರಿಸಿ ಸಾರ್ವಜನಿಕವಾಗಿ ಓಡಾಡಿದ ಕಾರಣ ಮುಂಬೈ ಪೊಲೀಸರು ಉರ್ಫಿ ಅವರನ್ನು ಬಂಧಿಸಿದ್ದಾರೆ ಎಂಬ ವಿಡಿಯೊ ವೈರಲ್‌ ಆಗಿತ್ತು. ವಿಡಿಯೊದಲ್ಲಿ ಇಬ್ಬರು ಮಹಿಳಾ ಪೊಲೀಸರು ಆಕೆಯನ್ನು ಠಾಣೆಗೆ ಕರೆದೊಯ್ಯುತ್ತಿರುವುದನ್ನು ನೋಡಬಹುದು. ಪೊಲೀಸರು ಕರೆದೊಯ್ಯುವ ವೇಳೆ ‘ಯಾಕೆ ನನ್ನನ್ನು ಕರೆದೊಯ್ಯುತ್ತಿದ್ದೀರಿ’ ಎಂದು ಉರ್ಫಿ ಕೂಗಿದ್ದಾರೆ. ಅದಕ್ಕೆ ಪೊಲೀಸರು ‘ಇಷ್ಟು ಸಣ್ಣ ಬಟ್ಟೆಯನ್ನು ಯಾರು ಧರಿಸುತ್ತಾರೆ’ ಎಂದು ಜೀಪ್‌ ಹತ್ತಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.