ADVERTISEMENT

ದೀಪಾವಳಿಗೆ ಟಾಪ್‌ಲೆಸ್ ಆಗಿ ಕಾಣಿಸಿಕೊಂಡು ದೀಪ ಬೆಳಗಿಸಿದ ಉರ್ಫಿ ಜಾವೇದ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 16:03 IST
Last Updated 23 ಅಕ್ಟೋಬರ್ 2022, 16:03 IST
ಉರ್ಫಿ ಜಾವೇದ್
ಉರ್ಫಿ ಜಾವೇದ್    

ಬೆಂಗಳೂರು: ಸದಾ ಮಾದಕ ಫೋಟೊ ಶೂಟ್ ಮೂಲಕ ಗಮನ ಸೆಳೆಯುವ ನಟಿ ಉರ್ಫಿ ಜಾವೇದ್ ಇದೀಗ ದೀಪಾವಳಿಗೆ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ.

ಅರೆಬೆತ್ತಲೆಯಾಗಿದೀಪ ಬೆಳಗಿಸಿ ಸಿಹಿ ತಿಂದಿರುವ ವಿಡಿಯೊವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅನೇಕರು ಉರ್ಫಿ ಅವರನ್ನು ಇದೇ ವಿಚಾರವಾಗಿ ತರಾಟೆಗೆ ತೆಗೆದುಕೊಂಡು ಕಮೆಂಟ್ ಮಾಡಿದ್ದಾರೆ.

ಉರ್ಫಿ ನಿನ್ನ ಈ ತರದ ಅವತಾರಗಳನ್ನು ನೋಡಿಯಾಗಿದೆ. ದೀಪಾವಳಿ ಹಬ್ಬದಲ್ಲಾದರೂ ಮೈತುಂಬ ಬಟ್ಟೆ ಹಾಕಿಕೊ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ

ADVERTISEMENT

ಅನೇಕ ನೆಟ್ಟಿಗರು ಉರ್ಫಿಯನ್ನು ಹಿಯಾಳಿಸಿಯೇ ಕಮೆಂಟ್ ಮಾಡಿದ್ದಾರೆ.

ಬಿಗ್‌ಬಾಸ್ ಒಟಿಟಿ ಮೂಲಕ ಜನಪ್ರಿಯತೆ ಗಳಿಸಿರುವ ಉರ್ಫಿ ಜಾವೇದ್, ವಿವಿಧ ರೀತಿಯ ಸ್ಟೈಲ್ ಸ್ಟೇಟ್‌ಮೆಂಟ್ ಮೂಲಕ ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.