ADVERTISEMENT

ತಮಿಳಿನ ಹಾಸ್ಯ ನಟ ವಡಿವೇಲುಗೆ ಕೋವಿಡ್‌ ದೃಢ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 6:39 IST
Last Updated 25 ಡಿಸೆಂಬರ್ 2021, 6:39 IST
 ವಡಿವೇಲು
ವಡಿವೇಲು   

ಚೆನ್ನೈ: ತಮಿಳು ಚಿತ್ರರಂಗ ಖ್ಯಾತ ಹಾಸ್ಯ ನಟ ವಡಿವೇಲು ಅವರಿಗೆ ಕೋವಿಡ್‌ ದೃಢಪಟ್ಟಿದ್ದು ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ

ಇಲ್ಲಿನ ಶ್ರೀರಾಮಚಂದ್ರ ಮೆಡಿಕಲ್‌ ಸೆಂಟರ್‌ಗೆ ದಾಖಲಾಗಿಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಓಮೈಕ್ರಾನ್‌ ಸೋಂಕು ತಗುಲಿರುವಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಆಸ್ಪತ್ರೆಮೂಲಗಳು ತಿಳಿಸಿವೆ.

ವಡಿವೇಲು ಕೆಲ ದಿನಗಳ ಹಿಂದಷ್ಟೆ ಇಂಗ್ಲೆಂಡ್‌ನಿಂದ ಮರಳಿದ್ದಾರೆ. ಅವರು ನೂತನ ಸಿನಿಮಾದ ಕೆಲಸಕ್ಕಾಗಿ ನಿರ್ದೇಶಕರೊಂದಿಗೆ ಲಂಡನ್‌ಗೆ ತೆರಳಿದ್ದರು. ಅವರ ಗಂಟಲು ಮಾದರಿಯನ್ನು ಹೆಚ್ಚಿನ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ADVERTISEMENT

ಕೆಲ ದಿನಗಳ ಕಾಲಸಿನಿಮಾಗಳಿಂದ ದೂರವೇ ಇದ್ದ ವಡಿವೇಲು ಹೊಸ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.