ADVERTISEMENT

ನಟ ಧನ್ವೀರ್ ಅಭಿನಯದ ವಾಮನ ಟೀಸರ್‌: ಹೈಪ್​ ಸೃಷ್ಟಿಸಿದ ‘ಶೋಕ್ದಾರ್‘

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 9:49 IST
Last Updated 16 ಆಗಸ್ಟ್ 2022, 9:49 IST
ಧನ್ವೀರ್
ಧನ್ವೀರ್   

ಚಂದನವನದ ‘ಶೋಕ್ದಾರ್’ ಎಂದೇ ಖ್ಯಾತರಾಗಿರುವ ನಟಧನ್ವೀರ್ ಗೌಡ ಅಭಿನಯದ ‘ವಾಮನ‘ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸೌಂಡ್‌ ಮಾಡುತ್ತಿದೆ.

ಪಕ್ಕಾ ಕರ್ಮಶಿಯಲ್‌ ಆಗಿರುವ ಈ ಚಿತ್ರದಲ್ಲಿ ‘ಧನ್ವೀರ್‌‘ ಮಾಸ್‌ ಎಂಟ್ರಿ ಅದ್ದೂರಿಯಾಗಿದೆ. ಆ್ಯಕ್ಷನ್‌ ಚಿತ್ರಕ್ಕೆಮಾಸ್‌ ಡೈಲಾಗ್‌ಗಳ ಮೂಲಕ 'ಶೋಕ್ದಾರ್''ಜೀವ ತುಂಬಿದ್ದಾರೆ. ಮಾಸ್‌ಎಂಟ್ರಿ, ಪಂಚಿಂಗ್‌ ಡೈಲಾಗ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

1.50 ನಿಮಿಷ ಇರುವ ‘ವಾಮನ’ ಟೀಸರ್ ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ. ಶಂಕರ್ ರಾಮನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಕುಮಾರ್ ಬಂಡವಾಳ ಹೂಡಿದ್ದಾರೆ.

ADVERTISEMENT

ಧನ್ವೀರ್ ಗೌಡಗೆ ಜೋಡಿಯಾಗಿ ‘ಏಕ್ ಲವ್ ಯಾ’ ಖ್ಯಾತಿಯ ನಟಿ ರೀಷ್ಮಾ ನಾಣಯ್ಯ ಅಭಿನಯಿಸುತ್ತಿದ್ದಾರೆ.ಸಂಪತ್, ಅಚ್ಯುತ್ ಕುಮಾರ್, ತಾರಾ ಅನುರಾಧ, ಶಿವರಾಜ್ ಕೆ.ಆರ್.ಪೇಟೆ, ಕಾಕ್ರೋಚ್ ಸುಧಿ ಸೇರಿದಂತೆ ಇತರರು ನಟಿಸಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.