ADVERTISEMENT

ಹಿರಿಯ ನಟಿ ಕಿಶೋರಿ ಬಲ್ಲಾಳ್ ನಿಧನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 11:17 IST
Last Updated 18 ಫೆಬ್ರುವರಿ 2020, 11:17 IST
ಕಿಶೋರಿ ಬಲ್ಲಾಳ್
ಕಿಶೋರಿ ಬಲ್ಲಾಳ್   

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದಹಿರಿಯ ನಟಿ ಕಿಶೋರಿ ಬಲ್ಲಾಳ್ ಅವರು ಮಂಗಳವಾರ ನಿಧನರಾಗಿದ್ದಾರೆ.

ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಿಶೋರಿ ಬಲ್ಲಾಳ್‌ ಅವರಿಗೆ ಸೊಸೆ ಅಹಲ್ಯಾ ಬಲ್ಲಾಳ್ ಇದ್ದಾರೆ.

‘ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು. ಇತ್ತೀಚೆಗೆ ಅವರುಉಸಿರಾಟ ತೊಂದರೆಯಿಂದ ಬಳಲುತ್ತಿದ್ದರುಎಂದು ಅವರ ಕುಟುಂಬದ ಆಪ್ತರು ತಿಳಿಸಿದ್ದಾರೆ.

ADVERTISEMENT

1960ರಲ್ಲಿ ತೆರೆಗೆ ಬಂದ ‘ಇವಳೆಂಥ ಹೆಂಡತಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. 2004ರಲ್ಲಿ ತೆರೆಗೆ ಬಂದ, ಶಾರೂಖ್ ಖಾನ್ ಅಭಿನಯದ ‘ಸ್ವದೇಸ್’ ಚಿತ್ರದಲ್ಲಿ ಕಿಶೋರಿ ಅವರು ‘ಕಾವೇರಿ ಅಮ್ಮ’ನ ಪಾತ್ರದಲ್ಲಿ ಅಭಿನಯಿಸಿದ್ದರು.

ವೀರಬಾಹು, ಹನಿ ಹನಿ, ಸೂರ್ಯಕಾಂತಿ, ನಾನಿ, ನನ್ನುಸಿರೇ, ಕಹಿ, ಶಿವಗಾಮಿ, ಅಕ್ಕತಂಗಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

2012ರಲ್ಲಿ ಪ್ರಸಾರ ಆರಂಭಿಸಿದ ‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ ಕಿಶೋರಿ ಅವರ ಪಾತ್ರ ವೀಕ್ಷಕರ ಮನಗೆದ್ದಿತ್ತು. ಈ ಧಾರಾವಾಹಿ ಐದು ವರ್ಷಗಳ ಸಂಭ್ರಮವನ್ನೂ ಆಚರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.