ನಟಿ ವಿದ್ಯಾಬಾಲನ್ ಶ್ರೇಷ್ಠ ಗಣಿತಜ್ಞೆ, ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಶಕುಂತಳಾ ದೇವಿ ಬಯೋಪಿಕ್ನಲ್ಲಿ ನಟಿಸಲಿದ್ದಾರೆ.
ಎಲ್ಲಾ ಸರಿಹೋಗಿದ್ದರೆ, ಈ ಸಿನಿಮಾಕ್ಕಿಂತ ಮೊದಲು ವಿದ್ಯಾಬಾಲನ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸಬೇಕಾಗಿತ್ತು.
ಪತ್ರಕರ್ತೆ– ಲೇಖಕಿ ಸಾಗರಿಕಾ ಘೋಷ್ ಅವರು ತಾವು ಬರೆದ ‘ಇಂದಿರಾ: ಇಂಡಿಯಾಸ್ ಮೋಸ್ಟ್ ಪವರ್ಫುಲ್ ಪ್ರೈಮ್ ಮಿನಿಸ್ಟರ್’ ಕೃತಿಯನ್ನುಸಿನಿಮಾ ಮಾಡುತ್ತಿರುವುದಾಗಿ ಕಳೆದ ವರ್ಷವೇ ಘೋಷಿಸಿದ್ದರು.
ಈ ಸಿನಿಮಾವನ್ನು ವಿದ್ಯಾ ಬಾಲನ್ ಹಾಗೂ ರಾಯ್ ಕಪೂರ್ ಫಿಲ್ಮ್ಸ್ನಿರ್ಮಾಣ ಮಾಡುತ್ತಿದೆ.ಆದರೆ ಅದಾದ ಬಳಿಕ ಈ ಸಿನಿಮಾ ಬಗ್ಗೆ ಇಲ್ಲಿಯವರೆಗೂ ಯಾವುದೇ
ಸುದ್ದಿ ಇಲ್ಲ.
‘ಮಿಷನ್ ಮಂಗಲ’ ಪ್ರಚಾರ ಸಂದರ್ಭದಲ್ಲಿ ವಿದ್ಯಾಬಾಲನ್ ಅವರಿಗೆ ಈ ಸಿನಿಮಾ ಬಗ್ಗೆ ಪ್ರಶ್ನೆ ಎದುರಾಗಿದೆ.
ಅದಕ್ಕೆ ‘ಸಿನಿಮಾ ಕೆಲಸಗಳು ಯಾವಾಗ ಬೇಕಾದರೂ ಆರಂಭ ಆಗಬಹುದು. ಆ ಸಿನಿಮಾಕ್ಕೆ ಸಂಬಂಧಪಟ್ಟ ಕೆಲಸಗಳು ನಡೆದಿವೆ. ಸಿನಿಮಾ ಸಂಬಂಧಿಸಿದ ವಿಚಾರ, ಇಂದಿರಾ ಅವರ ಜೀವನದಲ್ಲಿ ನಡೆದ ಪ್ರಮುಖ ಸಂಗತಿಗಳು, ಪ್ರೇಕ್ಷಕರಿಗೆ
ಏನು ಹೇಳಬೇಕು ಎಂಬ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ. ಸಿನಿಮಾ ಚಿತ್ರಕತೆ ಹಂತದಲ್ಲಿದೆ’ ಎಂದು ಉತ್ತರಿಸಿದ್ದಾರೆ.
ಈ ಸಿನಿಮಾದಲ್ಲಿ ಇಂದಿರಾ ಗಾಂಧಿಯಾಗಿ ವಿದ್ಯಾ ಬಾಲನ್ ಅವರೇ ನಟಿಸಲಿದ್ದಾರೆ.ಇಂದಿರಾಗಾಂಧಿ ಅವರ ಜೀವನದ ಕೆಲವು ಪ್ರಮುಖ ಘಟ್ಟಗಳನ್ನು ಚಿತ್ರೀಕರಿಸಲಾಗುತ್ತದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.