ADVERTISEMENT

ರಶ್ಮಿಕಾ ಕ್ಲಿಕ್ಕಿಸಿದ ಫೋಟೊಗೆ 10 ಲಕ್ಷ ಲೈಕ್ಸ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 3:03 IST
Last Updated 26 ಏಪ್ರಿಲ್ 2019, 3:03 IST
ನಟಿ ರಶ್ಮಿಕಾ ಮಂದಣ್ಣ ಕ್ಲಿಕ್ಕಿಸಿದ ವಿಜಯ ದೇವರಕೊಂಡ ಫೋಟೊ
ನಟಿ ರಶ್ಮಿಕಾ ಮಂದಣ್ಣ ಕ್ಲಿಕ್ಕಿಸಿದ ವಿಜಯ ದೇವರಕೊಂಡ ಫೋಟೊ   

ನಟ ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ‌ ‘ಗೀತ ಗೋವಿಂದಂ’ ಚಿತ್ರ ಗಲ್ಲಾಪೆಟ್ಟಿಗೆಯನ್ನು ದೋಚಿತ್ತು. ಆ ಮೂಲಕ ಈ ಜೋಡಿ ಸಿನಿ ಪ್ರೇಕ್ಷಕರ ಮನಗೆದ್ದಿದ್ದು ಹಳೆಯ ಸುದ್ದಿ. ಈ ಇಬ್ಬರೂ ಮತ್ತೆ ‘ಡಿಯರ್‌ ಕಾಮ್ರೇಡ್‌’ ಚಿತ್ರದಲ್ಲಿ ಒಂದಾಗಿದ್ದಾರೆ. ಈ ಸಿನಿಮಾದ ಶೂಟಿಂಗ್‌ ನಡೆಯುತ್ತಿರುವುದು ಕೇರಳದಲ್ಲಿ.

ಈ ಚಿತ್ರೀಕರಣದ ವೇಳೆ ತೆಗೆದ ವಿಜಯ ದೇವರಕೊಂಡ ಅವರ ಫೋಟೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಫೋಟೊಕ್ಕೆ ಹತ್ತು ಲಕ್ಷ ಜನರು ‘ಲೈಕ್‌’ ಒತ್ತಿದ್ದಾರೆ. ಅಂದಹಾಗೆ ಈ ಫೋಟೊ ಕ್ಲಿಕ್ಕಿಸಿದ್ದು ಕನ್ನಡತಿ ರಶ್ಮಿಕಾ ಮಂದಣ್ಣ! ದಕ್ಷಿಣ ಭಾರತದ ಹೀರೊ ಒಬ್ಬನ ಫೋಟೊವೊಂದು ಈ ಪರಿಯ ಲೈಕ್‌ಗಳನ್ನು ಗಿಟ್ಟಿಸಿಕೊಂಡಿರುವುದು ಇದೇ ಮೊದಲು.

ಯೂಟ್ಯೂಬ್‌ನಲ್ಲಿ ಪ್ರಕಟಗೊಳ್ಳುವ ಫೋಟೊಗಳು, ವಿಡಿಯೊಗಳನ್ನು ಲಕ್ಷಾಂತರ ಜನರು ನೋಡುವುದು ಸರ್ವೇ ಸಾಮಾನ್ಯ. ಆದರೆ, ಲಕ್ಷಾಂತರ ಸಂಖ್ಯೆಯಲ್ಲಿ ಲೈಕ್‌ಗಳ ಸುರಿಮಳೆ ಸುರಿಸುವುದು ವಿರಳ. ಅದರಲ್ಲೂ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಗೊಳ್ಳುವ ಫೋಟೊಕ್ಕೆ ಲೈಕ್‌ಗಳ ಮಹಾಪೂರ ಹರಿದುಬರುವುದು ತೀರಾ ಅಪರೂಪ.

ADVERTISEMENT

ಶೂಟಿಂಗ್‌ ವೇಳೆ ವಿಜಯ ದೇವರಕೊಂಡ ಸಮಚಿತ್ತದಿಂದ ಇದ್ದರು. ಅವರ ತಲೆಗೂದಲು ಕೂಡ ಅಸ್ತವ್ಯಸ್ತ ಆಗಿತ್ತು. ಅದೇ ವೇಳೆಗೆ ರಶ್ಮಿಕಾ ಫೋಟೊ ಕ್ಲಿಕ್ಕಿಸಿಬಿಟ್ಟರು. ದೇವರಕೊಂಡ ಅವರು ಆ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್‌ ಮಾಡಿದರು. ಒಂದು ವಾರ ಕಳೆಯುವುದರೊಳಗೆ ಅವರಿಗೂ ಅಚ್ಚರಿ ಕಾದಿತ್ತು. ಅಭಿಮಾನಿಗಳ ಪ್ರೀತಿಗೆ ಅವರೂ ಬೆರಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಫಾಲೊ ಮಾಡುತ್ತಿರುವ ಅಭಿಮಾನಿಗಳ ಸಂಖ್ಯೆ ಹೆಚ್ಚಳಗೊಂಡಿರುವುದಕ್ಕೆ ಅವರಿಗೆ ಫುಲ್‌ ಖುಷಿಯಾಗಿದೆಯಂತೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ ದೇವರಕೊಂಡ ಅವರನ್ನು ಫಾಲೊ ಮಾಡುತ್ತಿರುವವರ ಸಂಖ್ಯೆ 30 ಲಕ್ಷಕ್ಕೂ ಹೆಚ್ಚಿದೆ ಎನ್ನುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.