ADVERTISEMENT

ವೆಟ್ರಿಮಾರನ್‌ ಚಿತ್ರದಲ್ಲಿ ಅಪ್ಪ–ಮಗ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:40 IST
Last Updated 11 ನವೆಂಬರ್ 2019, 19:40 IST
   

ನಿರ್ದೇಶಕ ವೆಟ್ರಿಮಾರನ್‌ ಅವರ ಮುಂದಿನ ಹೊಸ ಚಿತ್ರದಲ್ಲಿ ನಟ ವಿಕ್ರಮ್‌ ಹಾಗೂ ಅವರ ಮಗ ಧ್ರುವ ಇಬ್ಬರೂ ಬಣ್ಣ ಹಚ್ಚುತ್ತಿರುವುದು ವಿಶೇಷ.

ಇತ್ತೀಚೆಗೆ ಬಿಡುಗಡೆಯಾದ ವೆಟ್ರಿಮಾರನ್‌ ನಿರ್ದೇಶನದ ‘ಅಸುರನ್‌’ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿತ್ತು. ಈಗ ಈ ಹೊಸ ಚಿತ್ರದಲ್ಲಿ ಅಪ್ಪ– ಮಗ ನಟಿಸುತ್ತಿರುವುದು ಮತ್ತು ಚಿತ್ರದ ಕತೆ ಬಗ್ಗೆ ಕುತೂಹಲ ಮೂಡಿಸಿದೆ. ಆದರೆ ಈ ಚಿತ್ರದ ಬಗ್ಗೆ ವೆಟ್ರಿಮಾರನ್‌ ಅಥವಾ ವಿಕ್ರಮ್‌ ಇಲ್ಲಿಯವರೆಗೂ ಏನನ್ನೂ ಹೇಳಿಲ್ಲ. ಈ ಚಿತ್ರಕ್ಕೆ ನಿರ್ಮಾಪಕ ಮುಕೇಶ್‌ ರತಿಲಾಲ್‌ ಮೆಹ್ತಾ ಅವರು ಬಂಡವಾಳ ಹೂಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.