ಪತ್ರಿಕೆ ಹಂಚುವ ಹುಡುಗ ಪತ್ರಿಕೋದ್ಯಮದಲ್ಲೇ ಬೆಳೆದುಬಂದರೆ ಹೇಗಿರುತ್ತದೆ? ಅಂಥದ್ದೊಂದು ಕತೆ ಹೇಳಿದೆ ‘ವೃತ್ತಪತ್ರಿಕೆ’. ಈ ಕಿರುಚಿತ್ರ ಕರ್ನಾಟಕ ಸೊಗಡಿನದ್ದು.
ಆ ಹುಡುಗನ ಕನಸಿನ ದಾರಿ, ಎದುರಾಗುವ ಕಷ್ಟ, ದುಃಖ, ಹತಾಶೆ, ಅವಮಾನ, ಪ್ರೀತಿ, ಖುಷಿ... ಹೀಗೆ ಎಲ್ಲವುಗಳ ಮನಮುಟ್ಟುವ ಸರಳ ನಿರೂಪಣೆ ಈ ಕಿರುಚಿತ್ರದಲ್ಲಿದೆ.
ರಂಗಭೂಮಿ ಪ್ರತಿಭೆ ಐಶ್ವರ್ಯಾ ಸಿದ್ಧಾರ್ಥ್ ತಾಂಬೆ ಈ ಚಿತ್ರದ ನಿರ್ದೇಶಕಿ. ನೀನಾಸಂ ಪದವೀಧರೆ. ಮಕ್ಕಳ ರಂಗಭೂಮಿಯಲ್ಲಿ ಸಕ್ರಿಯರು.
ಈ ಕಿರು ಚಿತ್ರಕ್ಕೆ ಕ್ಯಾಮೆರಾ ಹಿಡಿದವರು ಶ್ರೀಕಾಂತ್‌ಗೌಡ ಮತ್ತು ಶಶಾಂಕ್ ಮಲ್ಲಿಕಾರ್ಜುನ್. ಸಂಕಲನ ಶ್ರೀಹರ್ಷ ಗೋಭಟ್, ಸಂಗೀತ ನವನೀತ್ ಆಚಾರ್ ಹಾಗೂ ನಿರ್ಮಾಪಕರು ಪ್ರಿಯಾಂಕ ಸಿದ್ಧಾರ್ಥ್.
ಮುಖ್ಯಪಾತ್ರದಲ್ಲಿ ಅರುಣ್ ಜಾವೂರ್, ಜಯಂತ್ ಜಯ್, ಐಶ್ವರ್ಯ ತಾಂಬೆ, ರಂಗಕರ್ಮಿ ರವಿ ಕುಲಕರ್ಣಿ, ರಂಗ ಕಲಾವಿದೆ ಗಾಯಿತ್ರಿ ಹಡಪದ್, ಶಿವಮೊಗ್ಗದ ರಂಗನಾಥ್ ನೀನಾಸಂ ಹಾಗು ವಿಶೇಷ ಪಾತ್ರದಲ್ಲಿ ಖ್ಯಾತ ನಾಟಕಕಾರ ಡಾ. ಡಿ.ಎಸ್ ಚೌಗಲೆಯವರು ನಟಿಸಿದ್ದಾರೆ. ಈ ಕಿರುಚಿತ್ರವು ಹುಬ್ಬಳ್ಳಿಯ ಸುತ್ತಮುತ್ತಲೂ ಚಿತ್ರೀಕರಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.