ADVERTISEMENT

ಧರ್ಮ– ಅಧರ್ಮದ ಕದನ

ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 19:30 IST
Last Updated 28 ಮಾರ್ಚ್ 2019, 19:30 IST
ವಿಜಯ್‌ ರಾಘವೇಂದ್ರ
ವಿಜಯ್‌ ರಾಘವೇಂದ್ರ   

ನಟ ವಿಜಯ್‌ ರಾಘವೇಂದ್ರ ನಟಿಸಿರುವ ‘ಯದಾ ಯದಾ ಹೀ ಧರ್ಮಸ್ಯ’ ಸಿನಿಮಾ ಇದೇ ಶುಕ್ರವಾರ ತೆರೆಕಾಣುತ್ತದೆ.

ಧರ್ಮ ಹಾಗೂ ಅಧರ್ಮದ ನಡುವೆ ನಡೆಯುವ ಕಥೆ ಇದು. ವಿರಾಜ್‌ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್‌ ಧರಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿಜಯ್‌ ರಾಘವೇಂದ್ರ ಮತ್ತು ಪ್ರಜ್ವಲ್‌ ದೇವರಾಜ್‌ ಅವರ ಅನುಪಸ್ಥಿತಿ ಎದ್ದುಕಾಣುತ್ತಿತ್ತು.

‘ನಾಯಕ ಸಣ್ಣಪುಟ್ಟ ಡೀಲ್‌ ಮಾಡಿಕೊಂಡಿತ್ತಾನೆ. ಅವನದು ದುಡ್ಡೇ ದೊಡ್ಡಪ್ಪ ಎನ್ನುವ ಮನಸ್ಥಿತಿ. ಹಣ ಮಾಡುವ ಉಮೇದಿನಲ್ಲಿಯೇ ಭೂಗತಲೋಕಕ್ಕೆ ಅಡಿ ಇಡುತ್ತಾನೆ. ಅಲ್ಲೊಬ್ಬ ಡಾನ್‌ ಇರುತ್ತಾನೆ. ಅವರಿಬ್ಬರ ನಡುವೆ ನಡೆಯುವ ಹೋರಾಟದ ಸುತ್ತ ಕಥೆ ಹೆಣೆಯಲಾಗಿದೆ’ ಎಂದು ವಿವರಿಸಿದರು ವಿರಾಜ್.

ADVERTISEMENT

ಶ್ರಾವ್ಯ ಈ ಚಿತ್ರದ ನಾಯಕಿ. ಗೌರವಸ್ಥ ಕುಟುಂಬದ ಹುಡುಗಿಯಾಗಿ ಅವರು ಕಾಣಿಸಿಕೊಂಡಿದ್ದಾರಂತೆ. ಕೊನೆಗೆ, ಅವರು ವ್ಯವಸ್ಥೆಯ ವಿರುದ್ಧ ಗನ್‌ ಹಿಡಿಯುತ್ತಾರಂತೆ. ಅದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು ಎಂದ ನಿರ್ದೇಶಕರು, ಅವರ ಪಾತ್ರದ ಗುಟ್ಟು ಬಿಟ್ಟುಕೊಡಲಿಲ್ಲ. ನಟ ಪ್ರಜ್ವಲ್ ದೇವರಾಜ್‌ ಅವರು ವಿಶೇಷ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಅವರ ಪಾತ್ರ ಚಿತ್ರಕಥೆಗೆ ಹೊಸದೊಂದು ತಿರುವು ನೀಡಲಿದೆಯಂತೆ.

ನಟ ಸಾಯಿಕುಮಾರ್‌ ಅವರದ್ದು ಡಾನ್‌ ಪಾತ್ರವಂತೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಜ್ಯೂಡಾಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶಂಕರ್ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.