ADVERTISEMENT

ಬಾಲಿವುಡ್‌ ನಟಿ ಕುಂಕುಮ್‌ ನಿಧನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 12:10 IST
Last Updated 28 ಜುಲೈ 2020, 12:10 IST
ಕುಂಕುಮ್‌
ಕುಂಕುಮ್‌   

ಮುಂಬೈ: ಬಾಲಿವುಡ್‌ ನಟಿ ಕುಂಕುಮ್‌ (86) ಬಾಂದ್ರಾದಲ್ಲಿರುವ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು. ಕಳೆದ ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು.

ಬಿಹಾರದ ಶೇಖ್‌ಪುರ ಜಿಲ್ಲೆಯ ಹುಸೈನಾಬಾದ್‌ನಲ್ಲಿ ಜನಿಸಿದ್ದಅವರಮೊದಲ ಹೆಸರು ಝೈಬುನ್ನೀಸಾ. ಖ್ಯಾತ ನಿರ್ದೇಶಕ ಗುರುದತ್‌ ಅವರು ‘ಆರ್‌ಪಾರ್’‌ ಚಲನಚಿತ್ರದ ಹಾಡಿನಲ್ಲಿ ಅಭಿನಯಿಸಲು ಅವರಿಗೆ ಅವಕಾಶ ನೀಡಿದ್ದರು.

ಮದರ್‌ ಇಂಡಿಯಾ, ಮಿಸ್ಟರ್‌ ಎಕ್ಸ್‌ ಇನ್ ಬಾಂಬೆ, ಕೊಹಿನೂರ್‌, ಉಜಾಲಾ ಸೇರಿದಂತೆ100ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿಅವರು ಅಭಿನಯಿಸಿದ್ದರು. ಅಲ್ಲದೆ, 1963ರಲ್ಲಿ ಮೊದಲ ಭೋಜ್‌ಪುರಿ ಚಲನಚಿತ್ರದಲ್ಲಿಯೂ ನಟಿಸಿದ್ದರು.

ADVERTISEMENT

ಅವರ ಅಂತ್ಯಕ್ರಿಯೆ ಮಜ್‌ಗಾಂವ್‌ನಲ್ಲಿ ನಡೆಯಲಿದೆ ಎಂದು ಕುಟುಂಬ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.