ADVERTISEMENT

ಯುವರತ್ನ ‘ನೀನಾದೆ ನಾ’ ಹಾಡು ಬಿಡುಗಡೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 9:55 IST
Last Updated 20 ಡಿಸೆಂಬರ್ 2020, 9:55 IST
‘ನೀನಾದೆ ನಾ’ ಹಾಡಿನ ಪೋಸ್ಟರ್‌ (ಟ್ವಿಟರ್‌ ಚಿತ್ರ)
‘ನೀನಾದೆ ನಾ’ ಹಾಡಿನ ಪೋಸ್ಟರ್‌ (ಟ್ವಿಟರ್‌ ಚಿತ್ರ)   

ಯುವರತ್ನ ಚಿತ್ರ ನಿರ್ಮಾಪಕರು (ಹೊಂಬಾಳೆ ಫಿಲ್ಮ್ಸ್‌) ಈ ವರ್ಷಾಂತ್ಯದಲ್ಲಿ ‘ಯುವರತ್ನ’ ಚಿತ್ರದ ಇನ್ನೊಂದು ಹಾಡು ‘ನೀನಾದೆ ನಾ’ ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ. ಚಿತ್ರ ಹಾಡು ಬಿಡುಗಡೆಯ ಪೋಸ್ಟರ್‌ ಈಗಾಗಲೇ ಬಿಡುಗಡೆ ಆಗಿದೆ. ಡಿ. 25ರಂದು ಈ ಹಾಡು ಬಿಡುಗಡೆ ಆಗಲಿದೆ. ಅಂದ ಹಾಗೆ ಕನ್ನಡ– ತೆಲುಗು ಭಾಷೆಗಳಲ್ಲಿ ಈ ಹಾಡು ಮೂಡಿಬರಲಿದೆ.

ಪುನೀತ್‌ ರಾಜ್‌ಕುಮಾರ್‌ ಮತ್ತು ಸಯ್ಯೇಶಾ ಅವರು ಚಿತ್ರದ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಸಂತೋಷ್‌ ಆನಂದರಾಮ್‌ ನಿರ್ದೇಶಿಸುತ್ತಿದ್ದಾರೆ. ತಮನ್‌ ಎಸ್‌. ಅವರ ಸಂಗೀತವಿದೆ. ಹೊಸ ಚಿತ್ರದ ಬಗ್ಗೆ ಪುನೀತ್‌ ರಾಜ್‌ಕುಮಾರ್‌ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಯುವರತ್ನದಲ್ಲಿ ಪುನೀತ್‌ ಅವದರದ್ದು ಕಾಲೇಜು ವಿದ್ಯಾರ್ಥಿಯ ಪಾತ್ರ. ಇದರಲ್ಲಿಯೂ ಸಯ್ಯೇಶಾ, ದನಂಜಯ, ದಿಗಂತ್‌ ಮಂಚಲೆ, ಸೋನುಗೌಡ, ಪ್ರಕಾಶ್‌ರಾಜ್‌, ಅರುಣ್‌ಗೌಡ, ಅರ್ಜುನ್‌ ಗೌಡ, ವಿಶಾಲ್‌ ಹೆಗ್ಡೆ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಪುನೀತ್‌ ಕೂಡಾ ಒಂದು ಸೋಲೋ ಹಾಡನ್ನು ಹಾಡಿದ್ದಾರೆ. ಈ ಚಿತ್ರವು 2021ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.