ADVERTISEMENT

ಮುಂದಿನ ಸಿನಿಮಾದಲ್ಲಿ ಉತ್ತರ ಕರ್ನಾಟಕ ಕಲಾವಿದರಿಗೆ ಅವಕಾಶ: ಝೈದ್ ಖಾನ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:15 IST
Last Updated 11 ಡಿಸೆಂಬರ್ 2025, 6:15 IST
<div class="paragraphs"><p>ನಟ ಝೈದ್ ಅಹ್ಮದ್ ಖಾನ್</p></div>

ನಟ ಝೈದ್ ಅಹ್ಮದ್ ಖಾನ್

   

ವಿಜಯಪುರ: ಕಲ್ಟ್ ಸಿನಿಮಾ ಇದೇ ಜನೆವರಿ 23 ರಂದು ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ ಎಂದು ನಟ ಝೈದ್ ಅಹ್ಮದ್ ಖಾನ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಟ್ ಸಿನಿಮಾ ರೊಮ್ಯಾಂಟಿಕ್, ಥ್ರಿಲ್ಲರ್ ಸಿನಿಮಾ ಆಗಿದೆ. ಜನವರಿ 23ರಂದು ಬಿಡುಗಡೆಯಾಗಲಿದೆ ಎಂದರು.

ADVERTISEMENT

ಉತ್ತರ ಕರ್ನಾಟಕ ಭಾಗದ ಕಲಾವಿದರಿಗೆ ಅವಕಾಶಗಳು ದೊರೆಯುತ್ತಿಲ್ಲ ಎಂಬುದರ ಬಗ್ಗೆ ಈಗಷ್ಟೆ ನನಗೂ ತಿಳಿದು ಬಂದಿದೆ. ಮುಂಬರುವ ನನ್ನ ಸಿನಿಮಾಗಳಲ್ಲಿ ಕನಿಷ್ಠ 2-3 ಜನ ಉತ್ತರ ಕರ್ನಾಟಕದ ಕಲಾವಿದರಿಗೆ ಅವಕಾಶ ಕೊಡುತ್ತೇನೆಂದು ಘೋಷಿಸಿದರು.

ಇನ್ನು, ದುನಿಯಾ ವಿಜಯ ಅವರು ಸೂಪರ್ ಸ್ಟಾರ್ ಅವರಿಗೆ ಅವರ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲು ನಾನು ಮನವಿ ಮಾಡಿದ್ದೇ, ಆದರೆ ಅವರು ಈಗಲೇ ದಿನಾಂಕ ಘೋಷಣೆ ಮಾಡಿದ್ದರಿಂದ ಹಾಗೂ ಅವರ ಹುಟ್ಟು ಹಬ್ಬವೂ ಅದೇ ಸಂದರ್ಭದಲ್ಲಿರುವುದರಿಂದ ಮುಂದೂಡಲು ಆಗುವುದಿಲ್ಲ ಎಂದು ತಿಳಿಸಿದರು. ಆದರೆ ನನ್ನ ಸಿನಿಮಾಗೆ ಅವರು ಬೆಂಬಲ ಸೂಚಿಸಿದ್ದು, ನಾನು ಕೂಡ ಅವರ ಸಿನಿಮಾಗೆ ಬೆಂಬಲ ನೀಡುತ್ತೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.