ADVERTISEMENT

ಸಿದ್ದರಾಮಯ್ಯರ 75ನೇ ಜನ್ಮದಿನದ ಅಮೃತ ಮಹೋತ್ಸವ: ‘ಮೈಸೂರು ಹುಲಿಯಾ’ ಹಾಡು ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2022, 11:04 IST
Last Updated 3 ಆಗಸ್ಟ್ 2022, 11:04 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಎಪ್ಪತ್ತೈದರ ವಸಂತಕ್ಕೆ ಕಾಲಿಟ್ಟಿರುವ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನವಾದ ಇಂದು (ಆ.3) ಸಿದ್ದರಾಮಯ್ಯ ಕುರಿತ ‘ಮೈಸೂರು ಹುಲಿಯಾ’ ಹಾಡು ಬಿಡುಗಡೆಯಾಗಿದೆ.

ಸಲಗ’ ಸಿನಿಮಾದಲ್ಲಿ ‘ಟಿಣಿಂಗ ಮಿಣಿಂಗ ಟಿಶ್ಯಾ’ ಎಂಬ ಹಾಡಿಗೆ ಧ್ವನಿಯಾಗಿ ಖ್ಯಾತಿಪಡೆದಿದ್ದ ಗಿರಿಜಾ ಸಿದ್ದಿ ‘ಮೈಸೂರು ಹುಲಿಯಾ’ ಹಾಡು ಹಾಡಿದ್ದಾರೆ.

‘ಸಲಗ’ ಚಿತ್ರದ ಬಳಿಕ ಮನೆಮಾತಾಗಿದ್ದ ಗಿರಿಜಾ ಇದೇ ಮೊದಲ ಬಾರಿಗೆ ಜನಪದ ಶೈಲಿಯಲ್ಲಿ ಈ ಹಾಡು ಹಾಡಿದ್ದು, ಸಂಗೀತ ನಿರ್ದೇಶಕ ವೀರ್ ಸಮರ್ಥ್ ಈ ಹಾಡಿಗೆ ಸಂಗೀತ ನೀಡಿದ್ದು, ಸಿನಿಮಾ ಶೈಲಿಯಲ್ಲಿ ಹಾಡು ಮೂಡಿಬಂದಿದೆ.

ADVERTISEMENT

ಸಿದ್ದರಾಮಯ್ಯ ಅವರ ಜೀವನ ಸಾಧನೆಯ ವರ್ಣನೆ ಹೊಂದಿರುವ ಈ ಹಾಡಿಗೆ ‘ಜೇಮ್ಸ್’ ಸಿನಿಮಾ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.

‘ಕೈ ಹಿಡಿಯೋ ಕೈ ಸಿದ್ದರಾಮಯ್ಯ’ ಎನ್ನುತ್ತ ಆರಂಭವಾಗುವ ಈ ಹಾಡನ್ನು ಸಿದ್ದರಾಮಯ್ಯ ಅವರ ಆಪ್ತರೂ ಆಗಿರುವ ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿರ್ಮಾಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.