ADVERTISEMENT

BiggBoss Kannada ott: ವೂಟ್‌ನಲ್ಲಿ ಲೈವ್‌, ಮನೆಯಲ್ಲಿ ಯಾರೆಲ್ಲಾ ಇದ್ದಾರೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2022, 6:42 IST
Last Updated 6 ಆಗಸ್ಟ್ 2022, 6:42 IST
ಸುದೀಪ್‌
ಸುದೀಪ್‌   

ಬೆಂಗಳೂರು:ಬಿಗ್‌ಬಾಸ್‌ ಇತಿಹಾಸದಲ್ಲೇ ಮೊದಲ ‘ಬಿಗ್‌ಬಾಸ್‌ ಒಟಿಟಿ ಆವೃತ್ತಿ’ಯನ್ನು ಕಲರ್ಸ್‌ ಕನ್ನಡ ಆರಂಭಿಸಿದ್ದು, ಇದನ್ನು ‘ವೂಟ್‌ ಒಟಿಟಿ‘ ಮೂಲಕ ವೀಕ್ಷಣೆ ಮಾಡಬಹುದು.

ಇಂದು ಸಂಜೆಯಿಂದ (ಆಗಸ್ಟ್‌ 6ರಿಂದ) ಆರು ವಾರಗಳ ಕಾಲ ವೂಟ್‌ನಲ್ಲಿ ಇದರ ಲೈವ್‌ ಇರಲಿದೆ. ಮೊದಲ ಒಟಿಟಿ ‌ಆವೃತ್ತಿಯಲ್ಲಿ ಒಟ್ಟು 16 ಸೆಲಿಬ್ರಿಟಿಗಳು ಇರಲಿದ್ದಾರೆ.

42 ದಿನಗಳ ಈ ರಿಯಾಲಿಟಿ ಶೋ ಅನ್ನು ದಿನದ 24 ಗಂಟೆಯೂ ವೂಟ್‌ ಆ್ಯಪ್‌ ಮೂಲಕ ಲೈವ್‌ ಆಗಿ ವೀಕ್ಷಿಸಬಹುದಾಗಿದೆ.ಸುಮಾರು ಸಾವಿರಕ್ಕೂ ಅಧಿಕ ಗಂಟೆ ಲೈವ್‌ ಇರಲಿದ್ದು, ಇದು ಬಿಗ್‌ಬಾಸ್‌ ಮಾದರಿಯಲ್ಲೇ ಇತಿಹಾಸ ಎನ್ನಲಾಗಿದೆ. ಇದರ ಕೆಲವು ತುಣುಕುಗಳನ್ನುಕಲರ್ಸ್‌ ಕನ್ನಡ ಚಾನೆಲ್‌ನಲ್ಲೂ ವೀಕ್ಷಣೆ ಮಾಡಬಹುದು.

ADVERTISEMENT

ಇಂದು ಸಂಜೆ 7ಗಂಟೆಗೆ ವೂಟ್‌ ಒಟಿಟಿಯಲ್ಲಿ ಬಿಗ್‌ಬಾಸ್ ಆರಂಭವಾಗಲಿದೆ. ಇದು ವೂಟ್‌ ಆ್ಯಪ್‌ನಲ್ಲಿ ಮಾತ್ರ ಪ್ರಸಾರವಾಗಲಿದೆ. ಸೆಲೆಬ್ರಿಟಿಗಳನ್ನು ಅಧಿಕೃತವಾಗಿ ಸಂಜೆ ಘೋಷಣೆ ಮಾಡಲಾಗುವುದು. ವಾರಾಂತ್ಯದಲ್ಲಿ ನಟ ಸುದೀಪ್‌ ಕಾರ್ಯಕ್ರಮ ನಡೆಸಿಕೊಡುವರು.ಇನ್ನುಕಲರ್ಸ್‌ ಕನ್ನಡದಲ್ಲಿ ಬಿಗ್‌ಬಾಸ್‌ 9ನೇ ಆವೃತ್ತಿ ಅಕ್ಟೋಬರ್‌ ತಿಂಗಳಲ್ಲಿ ಪ್ರಾರಂಭವಾಗಲಿದೆ.

ಸೆಲೆಬ್ರಿಟಿಗಳಾದ ಸೋನು, ಅಕ್ಷತಾ ಕುಕ್ಕಿ, ರಾಕೇಶ್ ಅಡಿಗ, ರಾಗಿಣಿ, ರೇಖಾ ದಾಸ್, ಮುಖ್ಯಮಂತ್ರಿ ಚಂದ್ರು ಸಾನ್ಯ ಐಯ್ಯರ್, ಲೋಕೇಶ್, ಸೋಮಣ್ಣ ಮಾಚೀಮಡ, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್, ಕ್ರಿಕೆಟಿಗ ವಿನಯ್ ಕುಮಾರ್ ಸೇರಿದಂತೆ ಇನ್ನು ಹಲವಾರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.