ADVERTISEMENT

ಕೋವಿಡ್‌ನಿಂದ ಗುಣಮುಖ: ಅನುಭವ ಹಂಚಿಕೊಂಡ ನಟಿ ಜಾಹ್ನವಿ ಕಪೂರ್, ಸೋದರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2022, 11:00 IST
Last Updated 11 ಜನವರಿ 2022, 11:00 IST
ನಟಿ ಜಾಹ್ನವಿ ಕಪೂರ್ ಇನ್‌ಸ್ಟಾಗ್ರಾಂ ಚಿತ್ರ
ನಟಿ ಜಾಹ್ನವಿ ಕಪೂರ್ ಇನ್‌ಸ್ಟಾಗ್ರಾಂ ಚಿತ್ರ   

ದೇಶದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮೂರನೇ ಅಲೆಯು ಇಡೀ ವಿಶ್ವವನ್ನೇ ಆವರಿಸಿದೆ. ಈ ಮಧ್ಯೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಕೋವಿಡ್ ಪಾಸಿಟಿವ್ ಆಗುತ್ತಿದ್ದಾರೆ. ಇದೀಗ ನಟಿ ಜಾಹ್ನವಿ ಕಪೂರ್ ಕೂಡ ತಮಗೆ ಕೋವಿಡ್ಪಾಸಿಟಿವ್ ಆಗಿದ್ದ ಕುರಿತು ತನ್ನ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.

ಜ. 3 ರಂದು ಅವರು ಮತ್ತು ಅವರ ಸಹೋದರಿ ಖುಷಿ ಕಪೂರ್ ಇಬ್ಬರಿಗೂ ಕೋವಿಡ್ ಪಾಸಿಟಿವ್ ಆಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡ ಬಳಿಕ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

'ಹೇ ಗಯ್ಸ್, ನಾನು ಮತ್ತು ನನ್ನ ಸಹೋದರಿ ಜ. 3 ರಂದು ಕೋವಿಡ್ ಪಾಸಿಟಿವ್ ಆಗಿದ್ದೇವೆ. ನಾವು ಈಗ ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಹೇಳಿರುವಂತೆ ಅಗತ್ಯವಿರುವ ಹೋಮ್ ಐಸೋಲೇಶನ್ ದಿನಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಇಬ್ಬರ ವರದಿಯೂ ನೆಗೆಟಿವ್ ಆಗಿದೆ. ಮೊದಲ ಎರಡು ದಿನಗಳು ಕಠಿಣವಾಗಿದ್ದವು ಮತ್ತು ನಂತರ ಪ್ರತಿ ದಿನವೂ ಉತ್ತಮವಾಯಿತು. ಈ ವೈರಸ್‌ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ಮಾಸ್ಕ್ ಧರಿಸುವುದು ಮತ್ತು ಲಸಿಕೆ ಪಡೆಯುವುದು! ಎಲ್ಲರೂ ಕಾಳಜಿ ವಹಿಸಿಕೊಳ್ಳಿ!!' ಎಂದಿದ್ದಾರೆ.

ADVERTISEMENT

ನಿನ್ನೆಯಷ್ಟೇ ಜಾನ್ವಿ ತಮ್ಮ ಕ್ವಾರಂಟೈನ್ ಡೈರಿಗಳ ಫೊಟೊಗಳನ್ನು ಹಂಚಿಕೊಂಡಿದ್ದರು. ನಟಿ ಚೇತರಿಸಿಕೊಳ್ಳುವ ಸಮಯದಲ್ಲಿ ಡ್ರಾಯಿಂಗ್, ಪುಸ್ತಕಗಳನ್ನು ಓದುವುದು, ಸೆಲ್ಫಿ ಮತ್ತು ತನ್ನ ಸಾಕು ನಾಯಿಯೊಂದಿಗೆ ಆಟವಾಡಿದ್ದಾರೆ.

ಇತ್ತೀಚೆಗಷ್ಟೇ ಅರ್ಜುನ್ ಕಪೂರ್, ಅಂಶುಲಾ ಕಪೂರ್, ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಅವರಿಗೆ ಕೋವಿಡ್ ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.